ಬಹುಭಾಷಾ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

ಚೆನ್ನೈ: ದಕ್ಷಿಣ ಭಾರತದ ಸಿನೆಮಾ ನಟಿ ಚಿತ್ರಾ ಶನಿವಾರ ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಚಿತ್ರಾ ಹೃದಯಾಘಾತಕ್ಕೊಳಗಾದರು ಎಂದು ವರದಿಯಾಗಿದೆ.
ಇತ್ತೀಚಿಗೆ ತಮಿಳು ಕಿರುತೆರೆಯಲ್ಲಿ ಜನಪ್ರಿಯ ಮುಖವಾಗಿದ್ದ ನಟಿ, ಬಹುಭಾಷೆಗಳ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಅವರು ಮಲಯಾಳಂ, ತಮಿಲುಮ ಕನ್ನಡ, ತೆಲುಗು ಹಾಗೂ ಹಿಂದಿ ಸೇರಿದಂತೆ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಅವರ ಅತ್ಯಂತ ಗಮನಾರ್ಹ ಪ್ರದರ್ಶನಗಳಲ್ಲಿ ಕಾಲಿಕ್ಕಲಂ (1990), ದೇವಾಸುರಂ (1993), ಮತ್ತು ಪಥಮುದಯಂ (1985) ಪಾತ್ರಗಳು ಸೇರಿವೆ.
1983ರಲ್ಲಿ ಚೊಚ್ಚಲ ಚಿತ್ರ ‘ಆಟಕಲಶಂ’ ನಲ್ಲಿ ಪ್ರೇಮ್ ನಜೀರ್ ಮತ್ತು ಮೋಹನ್ ಲಾಲ್ ಜೊತೆಯಲ್ಲಿ ನಟಿಸಿದ್ದರು.ಖ್ಯಾತನಟರಾದ ಕಮಲ ಹಾಸನ್, ರಜನೀಕಾಂತ್, ಮೋಹನ್ ಲಾಲ್ ಮೊದಲಾದ ಜನಪ್ರಿಯ ನಟರೊಂದಿಗೆ ಅವರು ನಟಿಸಿದ್ದರು.ಕನ್ನಡದಲ್ಲಿ ಸುಂದರ ಸ್ವಪ್ನಗಳು, ಕೃಷ್ಣ ಮೆಚ್ಚಿದ ರಾಧೆ ಮತ್ತು ಅಜಯ್-ವಿಜಯ್ ಮತ್ತಿತರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.
ಚಿತ್ರಾ 1965 ರಲ್ಲಿ ಕೊಚ್ಚಿಯಲ್ಲಿ ಜನಿಸಿದರು. ಮನರಂಜನಾ ಉದ್ಯಮಕ್ಕೆ ಕಾಲಿಡುವ ಮೊದಲು ಅವರು 10 ನೇ ತರಗತಿಯವರೆಗೆ ಓದಿದ್ದರು.
ಅವರು 1990 ರಲ್ಲಿ ವಿಜಯರಾಘವನನ್ನು ವಿವಾಹವಾದರು. ಅವರು ಪತಿ ಮತ್ತು ಪುತ್ರಿ ಮಹಾಲಕ್ಷ್ಮಿ ಅವರನ್ನು ಅಗಲಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement