ಮಾಜಿ ಸಚಿವ ವಿನಯ ಕುಲಕರ್ಣಿ ಹಿಂಡಲಗಾ ಜೈಲಿನಿಂದ ಬಿಡುಗಡೆ

ಬೆಳಗಾವಿ: ಮಾಜಿ ಸಚಿವ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದ್ದು, ಹೀಗಾಗಿ ಬಳಿಕ 9 ತಿಂಗಳ ಬಳಿಕ ವಿನಯ್ ಕುಲಕರ್ಣಿ ಇಂದು (ಶನಿವಾರ) ಬಿಡುಗಡೆಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅವರನ್ನು ಹಿಂಡಲಗಾ ಜೈಲಧಿಕಾರಿಗಳು ಪ್ರಕ್ರಿಯೆ ಮುಗಿಸಿ ಬಿಡುಗಡೆಗೊಳಿಸಿದ್ದಾರೆ.ಸುಪ್ರೀಂಕೋರ್ಟ್​ನ ಷರತ್ತಿನ ಅನ್ವಯ ವಿನಯ್​ ಕುಲಕರ್ಣಿ ಅವರು ಧಾರವಾಡಕ್ಕೆ ಹೋಗುವಂತಿಲ್ಲ.
ಜೈಲಿನ ಹೊರಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು, ಕುಟುಂಬಸ್ಥರು ಅವರನ್ನು ಸ್ವಾಗತಿಸಿದರು. ಈ ವೇಳೆ ನೂಕುನುಗ್ಗಲು ಉಂಟಾಯಿತು ಪೊಲೀಸರು ಗುಂಪನ್ನು ಚದುರಿಸಲು ಹರಸಾಹಸಪಟ್ಟರು.
ಆದರೆ, ಈ ವೇಳೆ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಿದ ಕಾರಣಕ್ಕಾಗಿ ವಿನಯ್​ ಕುಲಕರ್ಣಿ ಹಾಗೂ ಅವರ 3 ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಜೈಲಿನಿಂದ ಬಿಡುಗಡೆ ನಂತರ ಮಾತನಾಡಿ ಅವರು, ಮುಂಬರುವ ದಿನಗಳಲ್ಲಿ ನಾನು ಹೇಗಿರಬೇಕೆಂದು ಎಂದು ಪಾಠ ಕಲಿತಿದ್ದೇನೆ, ಇಂದು ಜಾಮೀನು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ನಿರಪರಾಧಿಯಾಗಿ ಹೊರಬರುತ್ತೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ಜೈಲಿನಲ್ಲಿದ್ದಾಗ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ನನಗೆ ಪುಸ್ತಕ ಓದುವ ಅಭ್ಯಾಸವೇ ಇರಲಿಲ್ಲ. ಜೈಲಿನಲ್ಲಿ ಪುಸ್ತಕ ಓದುವುದನ್ನು ಕಲಿತೆ. ಮುಂದಿನ ಜೀವನದಲ್ಲಿ ಹೇಗಿರಬೇಕು ಎಂಬ ಪಾಠ ಕಲಿತಿದ್ದೇನೆ ಎಂದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement