ಹೆಬ್ಬಾವನು ಕಾಳಿಂಗ ಸರ್ಪ ನುಂಗಿತ್ತಾ…!

ಕಾರವಾರ:ಸಣ್ಣ ಹಾವುಗಳು ದೊಡ್ಡ ಹಾವುಗಳು ನುಂಗುವುದು ಸಾಮಾನ್ಯ. ಅದೇರೀತಿ ಹೆಬ್ಬಾವುಗಳು ಬೇರೆ ಬೇರೆ ಪ್ರಾಣಿಗಳನ್ನು ನುಂಗವುದು ಸಾಮಾನ್ಯ. ಆದರೆ ಅಂಥ ದೊಡ್ಡ ಹಾವನ್ನೇ ಮತ್ತೊಂದು ಹಾವು ನುಂಗಲು ಮುಂದಾದರೆ..!
ಇಂಥದ್ದೇ ಒಂದು ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದದು ವರದಿಯಾಗಿದೆ. ಇಲ್ಲಿ ವಿಷಯಕ್ಕೆ ಹೆಸರುವಾಸಿಯಾದ ಕಾಳಿಂಗ ಸರ್ಪ ಮಮತ್ತೊಂದು ದೊಡ್ಡಹಾವನ್ನು ನುಂಗಲು ಮುಂದಾಗಿದೆ.
ಸರಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ನಡೆದ ಭೀಕರ ಕದನದಲ್ಲಿ ಕೊನೆಗೆ ಕಾಳಿಂಗ ಸರ್ಪದ ಶಕ್ತಿಯೇ ಮೇಲಾಗಿದೆ. ಹೆಬ್ಬಾವಿನ ಜಾತಿಗೆ ಸೇರಿದ ಹಾವು ಸೋತಿದೆ. ಇನ್ನೇಣು ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಬೇಕು ಎಂಬಷ್ಟರಲ್ಲಿ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆ ವೇಳೆ ಬಂದ ಅರಣ್ಯ ಸಿಬ್ಬಂದಿ ಎರಡು ಹಾವುಗಳನ್ನು ಬೇರ್ಪಡಿಸಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement