ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ರೋಲ್ಸ್​ ರಾಯ್ಸ್ ಕಾರು ಜಪ್ತಿ

ಬೆಂಗಳೂರು: ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಆದರೆ ಸೂಕ್ತ ದಾಖಲೆ ಇಲ್ಲದ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಕಾರನ್ನು ಬೆಂಗಳೂರಿನ ಯುಬಿ ಸಿಟಿಯಲ್ಲಿ ಸೀಜ್ ಮಾಡಲಾಗಿದೆ.
MH 02, BB 2 ಸಂಖ್ಯೆಯ ರೋಲ್ಸ್ ರಾಯ್ಸ್ ಕಾರು ಸೀಜ್ ಆಗಿದ್ದು, ಸೂಕ್ತ ದಾಖಲೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಬು ಎಂಬಾತ ಅಮಿತಾಭ್ ಬಚ್ಚನ್ ಅವರಿಂದ 6 ಕೋಟಿಗೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದರು ಎನ್ನಲಾಗಿದೆ. ಇನ್ನೂ ಸಹ ಕಾರಿನ ಮೂಲ ದಾಖಲಾತಿ ಬದಲಾಗದ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್ ಹೆಸರಲ್ಲೇ ಕಾರು ನೋಂದಣಿಯಾಗಿದೆ.
10ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಪೋರ್ಶ್, ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ ಅನೇಕ ಕಾರುಗಳು ಅಧಿಕಾರಿಗಳು ವಶಪಡಿಸಿಕೊಂಡ ಕಾರುಗಳ ಪಟ್ಟಿಯಲ್ಲಿವೆ. ಈ ಕಾರುಗಳನ್ನು ರೋಡ್ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಲು‌ ಅನ್ಯ ರಾಜ್ಯದಲ್ಲಿ ನೋಂದಣಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನ ಸೂಕ್ತ ದಾಖಲೆಗಳನ್ನು ತಂದು ಕೊಡುವಂತೆ ನೋಟಿಸ್ ನೀಡಲಾಗಿದೆ. ದಾಖಲೆಗಳಿಲ್ಲದೆ ಐಶಾರಾಮಿ ಕಾರುಗಳು ಓಡಾಡುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್, ಆರ್​ಟಿಒ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರು ಜಪ್ತಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ (ಮೇ 9) ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಪ್ರಕಟ ; ಫಲಿತಾಂಶ ಎಲ್ಲಿ ನೋಡುವುದು..? ಇಲ್ಲಿದೆ ಮಾಹಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement