ಪಾಕ್ ಪರ ಘೋಷಣೆ: 10 ಜನರ ಬಂಧನ, ನಾಲ್ವರ ವಿರುದ್ಧ ಎನ್‌ಎಸ್‌ಎ ಕಾಯ್ದೆ ಜಾರಿ

ಉಜ್ಜೈನ್: ಉಜ್ಜೈನ್ ನಗರದಲ್ಲಿ ಮೊಹರಮ್ ದಿನದಂದು ಪಾಕ್ ಪರ ಘೋಷಣೆ ಕೂಗಿದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು ನಾಲ್ವರ ವಿರುದ್ಧ ಎನ್‌ಎಸ್‌ಎ ಕಾಯ್ದೆ ಜಾರಿಯಾಗಿದೆ.
ಗೀತಾ ಕಾಲೋನಿಯಲ್ಲಿ ಆ.19 ರಂದು ಪಾಕ್ ಪರ ಘೋಷಣೆ ಕೂಗಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಲವು ಸಂಘಟನೆ ಹಾಗೂ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸಿ ಪಾಕಿಸ್ತಾನದ ಪ್ರತಿಕೃತಿಯನ್ನು ದಹಿಸಿದ್ದ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉಜ್ಜೈನ್ ನ ಎಸ್ ಪಿ ಸತ್ಯೇಂದ್ರ ಶುಕ್ಲ ಹೇಳಿದ್ದಾರೆ, ಆದರೆ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಪೊಲೀಸರ ಶಿಫಾರಸ್ಸಿನ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಎನ್‌ಎಸ್‌ಎ ಜಾರಿಗೊಳಿಸಿದ್ದು, ಈ ಪ್ರಕರಣದಲ್ಲಿ 10 ಮಂದಿಯನ್ನು ಈ ವರೆಗೂ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಪ್ರತಿಕ್ರಿಯೆ ನೀಡಿದ್ದು, ತಾಲೀಬಾನ್ ಮಾದರಿಯ ಮನಸ್ಥಿತಿಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement