ವಾಟ್ಸಾಪ್ ನಲ್ಲಿ ಮಹಿಳೆಯರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದವನ ತಲೆ ಬೋಳಿಸಿದ ಗ್ರಾಮಸ್ಥರು..!

ಬೆಳಗಾವಿ: ವಾಟ್ಸಾಪ್​ ಮೂಲಕ ಮಹಿಳೆಯರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರೇ ಸೇರಿ ತಲೆ ಬೋಳಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸುಧಾಕರ್ ಡುಮ್ಮಗೋಳ ಎಂಬಾತನೇ ತನ್ನ ಮೊಬೈಲ್​ನಿಂದ ಮಹಿಳೆಯರಿಗೆ ವಾಟ್ಸಾಪ್​ ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾನೆ.
ಇಂಥದ್ದೇ ಘಟನನೆ ಗ್ರಾಮಸ್ಥರಿಗೆ ಗೊತ್ತಾಗಿ ಆತನನ್ನು ಹಿಡಿದು ಆತನ ತಲೆ ಬೋಳಿಸಿದ್ದಾರೆ. ನಂತರದಲ್ಲಿ ಅವಮಾನ ತಾಳಲಾರದೇ ಯುವಕ ಊರನ್ನೇ ತೊರೆದಿದ್ದಾನೆ ಎಂದು ಹೇಳಲಾಗಿದೆ.
ಈತ ಹಿಂದೆಯೂ ಅನೇಕ ಬಾರಿ ಮಹಿಳೆಯರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅನೇಕ ಬಾರಿ ಎಚ್ಚರಿಕೆ ನೀಡಿದರೂ ಮತ್ತೆ ಅದನ್ನು ಮುಂದುವರೆಸಿದ ಕಾರಣ ಸಿಟ್ಟುಗೊಂಡ ಗ್ರಾಮಸ್ಥರುಈತನ ತಲೆ ಬೋಳಿಸಿ ಶಿಕ್ಷೆ ನೀಡಿದ್ದಾರೆ. ಗ್ರಾಮದ ಹಲವು ಮಂದಿಯ ಸಮ್ಮುಖದಲ್ಲೇ ತಲೆ ಬೋಳಿಸಲಾಗಿದ್ದು, ಆ ಸಂದರ್ಭದಲ್ಲಿ ಕೆಲವರು ಮೊಬೈಲ್​ನಲ್ಲಿಇದನ್ನು ಚಿತ್ರೀಕರಣವನ್ನೂ ಮಾಡಿದ್ದಾರೆ.
ಈ ವಿಡಿಯೋವನ್ನು ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದು ಇವೈರಲ್​ ಆಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ತನ್ನ ಖಯಾಲಿ ಮುಂದುವರೆಸಿದ್ದ ಹೀಗಾಗಿ ಈ ಶಿಕ್ಷೆ ನೀಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement