ಮಧ್ಯಪ್ರದೇಶ: ವಾಲ್ಮೀಕಿಗೆ ತಾಲಿಬಾನ್ ಹೋಲಿಸಿದ ಕಾರಣಕ್ಕೆ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಪ್ರಕರಣ ದಾಖಲು

ಮಧ್ಯಪ್ರದೇಶ ಪೊಲೀಸರು ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್‌ಗೆ ಹೋಲಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿಯ ಪರಿಶಿಷ್ಟ ಜಾತಿ ಕೋಶದ ರಾಜ್ಯ ಕಾರ್ಯದರ್ಶಿ ಸುನಿಲ್ ಮಾಳವೀಯ ಮತ್ತು ವಾಲ್ಮೀಕಿ ಸಮುದಾಯದ ಇತರ ಸದಸ್ಯರು ನೀಡಿದ ದೂರಿನ ಮೇರೆಗೆ ಸೋಮವಾರ ರಾಣಾ ವಿರುದ್ಧ ಗುನಾದಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಮಾಯಣ ಬರೆದ ನಂತರ ವಾಲ್ಮೀಕಿ ದೇವರಾದನು, ಅದಕ್ಕೂ ಮೊದಲು ಆತ ದರೋಡೆಕೋರನಾಗಿದ್ದ. ವ್ಯಕ್ತಿಯ ಸ್ವಭಾವ ಬದಲಾಗಬಹುದು. ಅಂತೆಯೇ, ತಾಲಿಬಾನ್‌ಗಳು ಈಗ ಭಯೋತ್ಪಾದಕರಾಗಿದ್ದಾರೆ, ಆದರೆ ಜನರು ಮತ್ತು ಪಾತ್ರಗಳು ಬದಲಾಗುತ್ತವೆ ಎಂದು ಚಾನೆಲ್ ಒಂದರೆ ಜೊತೆ ಮಾತನಾಡುತ್ತ ರಾಣಾ ಹೇಳಿದ್ದರು,
ರಾಣಾ ತನ್ನ ಹೇಳಿಕೆಗಳಿಂದ ಮಹರ್ಷಿ ವಾಲ್ಮೀಕಿಯನ್ನು ಅಗೌರವಿಸಿದ್ದಾರೆ ಮತ್ತು ವಾಲ್ಮೀಕಿ ಸಮುದಾಯ ಮತ್ತು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಮಾಳವೀಯ ಆರೋಪಿಸಿದ್ದಾರೆ.
ಅವರು ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್‌ಗೆ ಹೋಲಿಸಿದರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಆದ್ದರಿಂದ ನಾವು ಅವರ ವಿರುದ್ಧ ದೂರು ದಾಖಲಿಸಿದ್ದೇವೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಸೋಮವಾರ, “ರಾಟ್ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಸಂಬಂಧಪಟ್ಟ ಜಿಲ್ಲೆಗೆ (ಉತ್ತರ ಪ್ರದೇಶದ ಲಕ್ನೋ) ರವಾನಿಸಲಾಗುವುದು” ಎಂದು ಹೇಳಿದರು.
ರಾಣಾ ವಿರುದ್ಧ ಐಪಿಸಿ ಸೆಕ್ಷನ್ 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಲಕ್ನೋದಲ್ಲಿರುವ ಹಜರತ್‌ಗಂಜ್ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹುರೂನ್ ಇಂಡಿಯಾ ರಿಚ್ ಲಿಸ್ಟ್ 2026 : ಅಂಬಾನಿ ಹಿಂದಿಕ್ಕಿ ಮತ್ತೆ ಭಾರತದ ನಂ.1 ಶ್ರೀಮಂತನಾದ ಅದಾನಿ ; ಭಾರತದ ಟಾಪ್‌ 10 ಸಿರಿವಂತರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement