ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಗೆ ತೊಂದರೆ ನೀಡಿದ ದುಷ್ಕರ್ಮಿಗಳು: ದೂರು

ಹೊಸಪೇಟೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಅವರಿಗೆ ದುಷ್ಕರ್ಮಿಗಳು ತೊಂದರೆ ನೀಡಿದ್ದಾರೆ.
ಗುರುವಾರ ಮಲ್ಲಿಕಾರ್ಜುನ ಅವರ ಕುಟುಂಬವು ಐತಿಹಾಸಿಕ ಪುಣ್ಯಕ್ಷೇತ್ರವಾದ ಶ್ರೀ ತೇರಿನ ಹನುಮಪ್ಪ, ಶ್ರೀ ತಿರುಗಲ್ ತಿಮ್ಮಪ್ಪ ಮತ್ತು ಶ್ರೀ ಲಕ್ಷ್ಮೀ ದೇವಿ ಮಂದಿರ ದರ್ಶನ ಮಾಡಿ ವಾಪಸ್ಸು ಊರಿಗೆ ತೆರಳುವಾಗ ಅವರಿಗೆ ದುಷ್ಕರ್ಮಿಗಳು ತೊಂದರೆ ನೀಡಿದ್ದಾರೆ. ಈ ದೇವಸ್ಥಾನಗಳ ಸಮೀಪವೇ ಕಲ್ಲು ಗಣಿಗಾರಿಕೆ ಇದೆ. ಇವರ ಕಾರಿನ ಮೇಲೆ ಪ್ರೆಸ್‌ ಎಂದು ಬರೆಯಲಾಗಿತ್ತು. ಹೀಗಾಗಿ ಅವರು ಇಲ್ಲಿನ ಕಲ್ಲು ಗಣಿಗಾರಿಕೆ ವರದಿಗೆ ಬಂದ ಮಾಧ್ಯಮದವರು ಎಂದು ಭಾವಿಸಿ ಇವರ ಕಾರು ಹೋಗದಂತೆ ರಸ್ತೆಗೆ ಕಲ್ಲು ಹಾಗೂ ಮಣ್ಣು ಹಾಕಿ ರಸ್ತೆ ಬಂದ್‌ ಮಾಡಿದ್ದಾರೆ. ಅಲ್ಲದೆ ಇವರ ಸ್ನೇಹಿತರ ಬೈಕಿನ ಪೆಟ್ರೋಲ್‌ ತೆಗೆದಿದ್ದಾರೆ. ಇದು ತೊಂದರೆ ಕೊಡುವ ಪ್ರಯತ್ನ ಎಂದು ಸಂಶಯಿಸಲಾಗಿದೆ. ಅವರು ತಕ್ಷಣವೇ ತಮ್ಮ ಪತ್ನಿ ಹಾಗೂ ಮಗನನ್ನು ಕರೆದುಕೊಂಡು ಹೋಗಿ ತಪ್ಪಿಸಿಕೊಂಡಿದ್ದಾರೆ.
ಈ ಘಟನೆ ನಂತರ ಮಲ್ಲಿಕಾರ್ಜುನ ಅವರು ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಮಲ್ಲಿಕಾರ್ಜುನ ಹೇಳಿದ್ದು..: ಕೊಪ್ಪಳ ಜಿಲ್ಲಾ ಕೊಪ್ಪಳ ತಾಲೂಕು ಕೆರೆಹಳ್ಳಿ ಸಮೀಪವಿರುವ ಪುರಾತನದ ತೇರಿನ ಹನುಮಪ್ಪ , ತಿರುಗಲ ತಿಮ್ಮಪ್ಪ ಹಾಗೂ ಲಕ್ಮೀದೇವಿ ದರ್ಶನಕ್ಕಾಗಿ ಗುರುವಾರ ಸಂಜೆ 5 ಗಂಟೆಗೆ ದೇವರ ದರ್ಶನಕ್ಕಾಗಿ ಬಂದಿದ್ದೆ. ಪರಿಚಯಸ್ಥರಾದ ವಸಂತ ಹಾಗೂ ವೀರಣ್ಣ ಅವರ ಜೊತೆಗೆ ಸಂಜೆ 6.30 ಕ್ಕೆ ದರ್ಶನ ಮಾಡಿದ ನಾನು ನನ್ನ ಪತ್ನಿ, ನನ್ನ ಪುತ್ರ ರವಿತೇಜ್ ಬಂಗ್ಲೆ ಅವರು ವಾಪಸ್ಸಾಗುತ್ತಿದ್ದೆವು. ಈ ಸಮಯದಲ್ಲಿ ಅಲ್ಲಿರುವ ಕೆಲ ದುಷ್ಕರ್ಮಿಗಳು ನಾವು ಹೋಗುವ ದಾರಿಗೆ ಕಲ್ಲು ಹಾಗೂ ಮಣ್ಣು ಹಾಕಿ ಬಂದ್ ಮಾಡಿ ಮಅಡಿದ್ದರು. ಅಷ್ಟೇ ಅಲ್ಲ, ವಸಂತ ಹಾಗೂ ವೀರಣ್ಣ ಅವರ ಬೈಕ್ ನಲ್ಲಿರುವ ಪೆಟ್ರೊಲ್ ತೆಗೆಯಲಾಗಿತ್ತು. ಅನಾಹುತ ಮಾಡುವುದಕ್ಕಾಗಿ ಪ್ಲಾನ್ ಮಾಡಿದ್ದು ಮೇಲ್ನೋಟ್ಟಕ್ಕೆ ಕಂಡು ಬರುತ್ತಿದೆ. ಆದರೂ ದೇವರ ದಯದಿಂದ ಆ ಬೈಕ್ ಗಳ ಸಹಾಯದಿಂದ ಕೆರೆ ಹಳ್ಳಿ ರಾತ್ತಿ 7.45 ತಲುಪಿದ್ದೇನೆ. ನನ್ನ Ritz ಕಾರ್ ನಂಬರ್ kA34 M 7986 ನಂಬರಿನ ಕಾರನ್ನು ಆ ದುರ್ಗಮ ಸಲ್ಲಾನಪುರ ಸ್ಟೋನ್ ಕ್ರಷರ್ ಏರಿಯಾದಲ್ಲಿ ಬಿಟ್ಟು ಬಂದೆ ಎಂದು ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಇದಾದ ನಂತರ ನನ್ನ ಕೊಪ್ಪಳ ಜಿಲ್ಲೆಯ ಮಾಧ್ಯಮ ಸ್ನೇಹಿತರಿಗೆ , ಕೊಪ್ಪಳ ಪೋಲೀಸ್ ವರಿಷ್ಟಾಧಿಕಾರಿ ಶ್ರೀಧರ್ ಅವರ ಗಮನಕ್ಕೆ ತಂದಿದ್ದೇನೆ. ಅಲ್ಲದೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೂ ತಿಲಿಸಿದ್ದೇನೆ. ಮುಂದೆ ಏನಾಗುತ್ತದೆಯೋ ಎಂಬ ಆತಂಕವಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಪತ್ರಕರ್ತರ ಸಂಘದಿಂದ ಮನವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಅವರ ಕುಟುಂಬವು ಪುಣ್ಯಕ್ಷೇತ್ರವಾದ ತೇರಿನ ಹನುಮಪ್ಲ, ತಿರುಗಲ್ ತಿಮ್ಮಪ್ಪ ಮತ್ತು ಲಕ್ಷ್ಮೀ ದೇವಿ ಮಂದಿರ ದರ್ಶಿಸಿ ವಾಪಸ್ಸು ಬರುವಾಗ ದುಷ್ಕರ್ಮಿಗಳು ತೊಂದರೆ ನೀಡಿದ್ದಾರೆ. ಈ ಕಾರಣಕ್ಕೆ ಆಗಸ್ಟ್‌ 27ರಂದು ಬೆಳಿಗ್ಗೆ 10:30 ಕ್ಕೆ ಬಳ್ಳಾರಿ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಬಳ್ಳಾರಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವುದು ಬಳ್ಳಾರಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಜಗನ್ಮೋಹನ ರೆಡ್ಡಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement