ಪೈಲಟ್‌ಗೆ ಹೃದಯಾಘಾತ, ಬಾಂಗ್ಲಾದೇಶದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಷ

ನಾಗ್ಪುರ: ಪೈಲಟ್‌ಗೆ ಹೃದಯಾಘಾತ ಆಗಿ ಬಾಂಗ್ಲಾದೇಶದ ಬಿಮನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ಆಗಿರುವ ಘಟನೆ ವರದಿಯಾಗಿದೆ.
ಮಸ್ಕತ್‌ನಿಂದ ಢಾಕಾಗೆ ಹೊರಟಿದ್ದ ಬಾಂಗ್ಲಾದೇಶ ವಿಮಾನದ ಪೈಲಟ್‌ಗೆ ದಾರಿ ಮಧ್ಯೆ ಹೃದಯಾಘಾತವಾಗಿದೆ. ಇದರಿಂದಾಗಿ ತಕ್ಷಣವೇ ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
126 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ ವಿಮಾನ ಶುಕ್ರವಾರ ಬೆಳಗ್ಗೆ 11.40ರ ಹೊತ್ತಿಗೆ ನಾಗ್ಪುರದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ. ಬಳಿಕ ಪೈಲಟ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ರಾಯಪುರ ಸಮೀಪದಲ್ಲಿದ್ದಾಗ ತುರ್ತು ಲ್ಯಾಂಡಿಂಗ್‌ಗಾಗಿ ಕೋಲ್ಕತ್ತಾ ಎಟಿಸಿಯನ್ನು ಸಂಪರ್ಕಿಸಲಾಯಿತು. ಅಲ್ಲಿಂದ ಹತ್ತಿರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಯಲು ಸೂಚಿಸಲಾಯಿತು.ಅದರಂತೆ ನಾಗ್ಪುರದಲ್ಲಿ ತುರ್ತು ಭೂಸ್ಪರ್ಷ ಮಾಡಲಾಯಿತು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ನಿಮ್ಮ ಕಾಮೆಂಟ್ ಬರೆಯಿರಿ

advertisement