ಮಲೇಷಿಯಾದಿಂದ ತಿರುಚಿಗೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ 36 ವರ್ಷದ ವ್ಯಕ್ತಿ ಸಾವು

ತಿರುಚಿ: ಮಲೇಷಿಯಾದಿಂದ ತಿರುಚಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ 36 ವರ್ಷದ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ವಿಮಾನ ನಿಲ್ದಾಣದಿಂದ 60 ನಾಟಿಕಲ್ ಮೈಲುಗಳಲ್ಲಿದ್ದಾಗ ವೈದ್ಯಕೀಯ ನೆರವು ಕೋರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳು ಹೇಳುವಂತೆ ಪ್ರಯಾಣಿಕ, ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿತ್ತಿದ್ದರು.
ವಿಮಾನ ನಿಲ್ದಾಣವು ವೈದ್ಯಕೀಯ ಸಹಾಯಕ್ಕಾಗಿ ವಿನಂತಿಯನ್ನು ಸ್ವೀಕರಿಸಿದ್ದರಿಂದ ಅವರ ವೈದ್ಯಕೀಯ ತಂಡವನ್ನು ಅಲರ್ಟ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಎಸ್ ಧರ್ಮರಾಜ್ ಹೇಳಿದ್ದಾರೆ. 185 ಪ್ರಯಾಣಿಕರನ್ನು ಹೊಂದಿರುವ ವಿಮಾನವು ಬೆಳಿಗ್ಗೆ 7:58 ಕ್ಕೆ ತಿರುಚಿಯಲ್ಲಿ ಬಂದಿಳಿಯಿತು. ನಂತರ, ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ವಿಮಾನದ ಒಳಗೆ ಹೋಗಿ ಪ್ರಯಾಣಿಕರನ್ನು ಪರೀಕ್ಷಿಸಿತು. ವೈದ್ಯರು ವಿಮಾನದಲ್ಲಿಯೇ ಅವರು ಸತ್ತಿದ್ದಾರೆ’ ಎಂದು ಪ್ರಮಾಣೀಕರಿಸಿದ್ದಾರೆ ಮತ್ತು ಮಾಹಿತಿಯನ್ನು ಪೊಲೀಸರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ವೆಲ್ಮುರುಗನ್ ಅವರ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಳ್ಳಲು ಆಗಲೇ ಬಂದಿದ್ದರು ಮತ್ತು ಅಧಿಕಾರಿಗಳು ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಮೃತ ಪ್ರಯಾಣಿಕನ ಮೃತದೇಹವನ್ನು ನಂತರ ತಿರುಚಿಯ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಮತ್ತು ಮರಣೋತ್ತರ ಪರೀಕ್ಷೆ ಭಾನುವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.
ಏತನ್ಮಧ್ಯೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು “ಇದು ಕೋವಿಡ್ ಅಲ್ಲದ ಸಾವು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ತಂಡವು ಈಗಾಗಲೇ ದೃಢಪಡಿಸಿದೆ. ಆದ್ದರಿಂದ, ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement