ಆಗ್ರಾ: ಪ್ರೆಶರ್‌ ಕುಕ್ಕರಿನಲ್ಲಿ ಸಿಲುಕಿಕೊಂಡ ಪುಟ್ಟ ಮಗುವಿನ ತಲೆ ಹೊರ ತೆಗೆದ ವೈದ್ಯರ ತಂಡ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರ ತಂಡವು ಎರಡು ಗಂಟೆಗಳ ಕಠಿಣ ಪರಿಶ್ರಮದ ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಸಿಲುಕಿಕೊಂಡಿದ್ದ ಮಗುವಿನ ತಲೆಯನ್ನು ಹೊರ ತೆಗೆದಿದೆ.
ಕುಟುಂಬ ಸದಸ್ಯರ ಪ್ರಕಾರ, ಒಂದೂವರೆ ವರ್ಷದ ಬಾಲಕ ಶನಿವಾರ ನಗರದ ತನ್ನ ಚಿಕ್ಕಪ್ಪನ ಮನೆಯಲ್ಲಿ ಆಟವಾಡುತ್ತಿದ್ದಾಗ ತಲೆ ಕುಕ್ಕರ್ ಒಳಗೆ ಸಿಲುಕಿಕೊಂಡಿದೆ.
ಕುಟುಂಬದ ಸದಸ್ಯರು ಮನೆಯಲ್ಲಿ ಮಗುವಿನ ತಲೆಯನ್ನು ಕುಕ್ಕರ್ ನಿಂದ ಹೊರತೆಗೆಯಲು ಪ್ರಯತ್ನಿಸಿದರೂ ಆಗಲಿಲ್ಲ. ನಂತರ ಅವರು ಮಗುವನ್ನು ಎಸ್‌ಎಂ ಚಾರಿಟೇಬಲ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಡಾ. ಫರ್ಹತ್ ಖಾನ್ ಹಾಗೂ ಅವರ ತಂಡವು ಎರಡು ಗಂಟೆಗಳ ಶ್ರಮದ ಪ್ರಯತ್ನದ ನಂತರ ಕುಕ್ಕರ್‌ ನಿಂದ ತಲೆಯನ್ನು ಹೊತೆಗೆದು ಮಗುವನ್ನು ಉಳಿಸಿದೆ.
“ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಕುಕ್ಕರ್ ಅನ್ನು ಗ್ರೈಂಡರ್ ಯಂತ್ರದ ಸಹಾಯದಿಂದ ಕತ್ತರಿಸಲಾಗಿದೆ … ನಾವು ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಯಿತು” ಎಂದು ಡಾ. ಖಾನ್ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement