ಪ್ಯಾರಾಲಿಂಪಿಕ್ಸ್: ಚಿನ್ನಗೆದ್ದ ಸುಮಿತ್ ಆಂಟಿಲ್ ಗೆ 6 ಕೋಟಿ ರೂ.ಬಹುಮಾನ

ಹೊಸದಿಲ್ಲಿ: ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಪದಕ ಗೆದ್ದ ಭಾರತದ ಸುಮಿತ್ ಆಂಟಿಲ್ ಅವರಿಗೆ ಹರ್ಯಾಣ ಸರಕಾರವು 6 ಕೋಟಿ ರೂ.ಗಳ ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.
ಪುರುಷರ ಎಫ್ 56 ವಿಭಾಗದ ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಜಯಿಸಿರುವ ಯೋಗೇಶ್ ಕಥುನಿಯಾಗೆ 4 ಕೋಟಿ ರೂ.ಗಳ ಬಹುಮಾನ ಹಾಗೂ ಸರಕಾರಿ ನೌಕರಿ ನೀಡುವುದಾಗಿಯೂ ಸರಕಾರ ತಿಳಿಸಿದೆ.
23ರ ಹರೆಯದ ಸುಮಿತ್ ಹರ್ಯಾಣದ ಸೋನಿಪತ್ ನವರು. 2015ರಲ್ಲಿ ಸಂಭವಿಸಿದ್ದ ಮೋಟಾಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಗೆದ್ದಿರುವ ಯೋಗೇಶ್ ಕೂಡ ಹರ್ಯಾಣ ರಾಜ್ಯದವರೇ ಆಗಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   3 ವರ್ಷದ ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ ; ಉಸಿರುಗಟ್ಟಿ ಪುಟ್ಟ ಬಾಲಕಿ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement