ಶಿವಸೇನೆ ಸಂಸದೆ ಮನೆ, ಕಚೇರಿ ಸೇರಿ 5 ಕಡೆ ಇಡಿ ದಾಳಿ

ಮುಂಬೈ: ಮಹಾರಾಷ್ಟ್ರದ ಯಾವತ್ಮಲ್​-ವಾಶಿಂ ಸಂಸದೆ ಭಾವನಾ ಗವಲಿ (Bhavana Gawali) ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಇಂದು (ಸೋಮವಾರ) ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಸಾಲ ಪಡೆದು ವಂಚನೆ ಮಾಡಿದ ಆರೋಪದಡಿ ಭಾವನಾ ಗವಾಲಿಯವರ ಟ್ರಸ್ಟ್​ ವಿರುದ್ಧ ತನಿಖೆ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಇ.ಡಿ.ಇಂದು ಹಲವು ದಾಖಲೆಗಳನ್ನು ಹಾಗೂ ಸುಮಾರು 17 ಕೋಟಿ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಹರೀಶ್​ ಸರ್ದಾ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಇತ್ತೀಚೆಗೆ ಭಾವನಾ ಗವಲಿ ವಿರುದ್ಧ ಹಣದ ವಂಚನೆ ಆರೋಪ ಮಾಡಿದ್ದರು. ಭಾವನಾ, ಬಾಲಾಜಿ ಸಹಕಾರಿ ಪಾರ್ಟಿಕಲ್ ಬೋರ್ಡ್​ ಎಂಬ ಸಂಸ್ಥೆಯ ಹೆಸರಿನಲ್ಲಿ, ನ್ಯಾಷನಲ್​ ಕೋ ಆಪರೇಟಿವ್​ ಡೆವಲಪ್​ಮೆಂಟ್​ ಕಾರ್ಪೋರೇಶನ್​ (NCDC)ಅದರಿಂದ 43.35 ಕೋಟಿ ರೂಪಾಯಿ ಸಾಲ ಪಡೆದು, ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಅಲ್ಲದೆ, ಭಾವನಾ, ಎನ್​ಸಿಡಿಸಿಯಿಂದ 10 ವರ್ಷಗಳ ಕಾಲ ಸಾಲ ಪಡೆದಿದ್ದಾರೆ. ಕಂಪನಿ ಪ್ರಾರಂಭವಾಗುವುದಕ್ಕೂ ಮೊದಲೇ ಅದರ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಬಿಜೆಪಿ ನಾಯಕನಿಂದಲೂ ಆರೋಪ
ಸಂಸದೆ ಭಾವನಾ ವಿರುದ್ಧ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಕೂಡ ಹಣ ವಂಚನೆಯ ಆರೋಪ ಮಾಡಿದ್ದಾರೆ. ಭಾವನಾ ಗವಲಿ ವಿವಿಧ ಬ್ಯಾಂಕ್​ ಮತ್ತು ಇತರ ಹಣಕಾಸಿನ ಸಂಸ್ಥೆಗಳಿಂದ 100 ಕೋಟಿ ರೂಪಾಯಿಗಳನ್ನು ಹಣ ಸಾಲ ಪಡೆದು, ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಭಾವನಾ ಗವಲಿ, 55 ಕೋಟಿ ರೂಪಾಯಿ ಮೌಲ್ಯದ ಕಾರ್ಖಾನೆಯನ್ನು 25 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳು ಭಾವನಾ ಗವಲಿ ಹಣಕಾಸಿನ ವ್ಯವಹಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement