ಶ್ರೀಕೃಷ್ಣ ಜನ್ಮಾಷ್ಟಮಿ..: ಕೃಷ್ಣ-ರಾಧೆ ವೇಷ ಧರಿಸಿ ಚಿಣ್ಣರ ಸಂಭ್ರಮ

ಧಾರವಾಡ; ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಪರಂಪರೆಯ ಪರಿಚಯ ಮಾಡಿಕೊಡುವ ಸಂದರ್ಭ. ಪ್ರತಿ ಹಬ್ಬದಿಂದ ನಾವು ಒಂದು ಒಳ್ಳೆಯ ಸಂದೇಶ ಪಡೆಯುತ್ತೇವೆ. ಎಂದು ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬದ ಆಚರಣೆಯ ಮಹತ್ವ, ಸಂದೇಶಗಳ ಪರಿಚಯ ಇಂದಿನ ಮಕ್ಕಳಿಗೆ ಅತಿ ಅವಶ್ಯ. ಕೊರೊನಾದಂತಹ ಮಹಾಮಾರಿಯಿಂದ ಮಕ್ಕಳು ಶಾಲೆಯಿಂದ ದೂರ ಉಳಿದಿರುವುದು ಅತ್ಯಂತ ವಿಷಾದನೀಯ. ಆಟವಾಡಿ ಪಾಠ ಕಲಿಯುವ ಮಕ್ಕಳಿಗೆ ಗೃಹ ಬಂಧನವಾಗಿತ್ತು. ಆದರೆ ಇದು ಅನಿವಾರ್ಯವಾಗಿತ್ತು, ಇದೀಗ ಶಾಲೆ ಪ್ರಾರಂಭವಾಗಿರುವುದರಿಂದ ಅತ್ಯಂತ ಸಂಭ್ರಮದಿಂದ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಾರೆ. ಹಲವಾರು ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಪ್ರಾರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮನೋಲ್ಲಾಸ, ಓದಿಗೆ ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕೃಷ್ಣ, ರಾಧೆ ವೇಷ ಧರಿಸಿ ಹಲವಾರು ಮಕ್ಕಳು ಕೃಷ್ಣನ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ಈ ಸಂದರ್ಭದಲ್ಲಿ ಪ್ರಾಚಾರ್ಯೆ ಸಾಧನಾ. ಎಸ್. ಮಹಾವೀರ ಉಪಾದ್ಯೆ, ರಜನಿ ದಾಸ ಉಪಸ್ಥಿತರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement