ಸೋಮವಾರದಿಂದ 6ರಿಂದ 8ನೇ ತರಗತಿಗಳು ಆರಂಭ: ಮಾರ್ಗಸೂಚಿ-ತರಗತಿಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: 6 ರಿಂದ 8 ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಒಂದೇ ಶಾಲೆಯ ಕಟ್ಟಡದಲ್ಲಿ ಎಲ್ಲ ಮಕ್ಕಳೂ ಪಾಠ ಕೇಳಬೇಕಾದ್ದರಿಂದ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ‌ಮಾಡಿದೆ.
ಯಾವ ತರಗತಿಯ ಮಕ್ಕಳು ಯಾವಾಗ ಶಾಲೆಗೆ ಬರಬೇಕು, ತರಗತಿಯೊಳಗೆ ಎಷ್ಟು ಮಕ್ಕಳಿರಬೇಕು, ಶಿಕ್ಷಕರು ಮತ್ತು ಸಿಬ್ಬಂದಿಗೆ ಯಾವ ನಿಯಮ…ಇವುಗಳ ಬಗ್ಗೆ ವಿವರ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿದೆ.
ಸೆಪ್ಟೆಂಬರ್ 6 ರಿಂದ ಎರಡನೇ ಹಂತದ ಶಾಲೆ ಪ್ರಾರಂಭವಾಗಲಿದೆ. ಪಾಸಿಟಿವಿಟಿ ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ ಮಾಡಲು ಸರ್ಕಾರ ಸೂಚಿಸಿದೆ. 6 ರಿಂದ 8 ನೇ ತರಗತಿ ಹಾಜರಾತಿಗೆ ದರೊಂದಿಗೆ ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕೂಡಾ ಕಡ್ಡಾಯ ಎಂದು ತಿಳಿಸಲಾಗಿದೆ. ಹಾಗಾಗಿ ಪೋಷಕರಿಗೆ ಆತಂಕವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವ ಅವಕಾಶ ಕಲ್ಪಿಸಲಾಗಿದೆ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ದೃಢೀಕರಿಸಬೇಕು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿಗಳು ಕುಡಿಯುವ ‌ನೀರು ಹಾಗೂ ಆಹಾರವನ್ನು ಮನೆಯಿಂದಲೇ ತರಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಡಳಿತ ಮಂಡಳಿಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್​ಲೈನ್ ತರಗತಿಗಳು ಎಂದಿನಂತೆ ನಡೆಯಲಿದೆ. ಹಾಗಾಗಿ ಆನ್ ಲೈನ್ ತರಗತಿಗೂ ಅವಕಾಶವಿದೆ. ಸೋಮವಾರ ದಿಂದ ಶುಕ್ರವಾರದ ವರೆಗೆ ಮಾತ್ರ ತರಗತಿ ನಡೆಸಬೇಕು. ಉಳಿದ ದಿನಗಳಲ್ಲಿ ಶಾಲೆಯ ಸ್ವಚ್ಛತೆ ಮಾಡಿಕೊಳ್ಳಬೇಕು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಯಾವ ತರಗತಿಗೆ ಯಾವ ಸಮಯ?
6 ರಿಂದ 8 ನೇ ತರಗತಿ ನಿರ್ವಹಣೆ ವೇಳಾಪಟ್ಟಿ ಕೂಡಾ ನೀಡಲಾಗಿದೆ. 8 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ತರಗತಿ ನಡೆಸಲು ಸೂಚಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ 4:30 ರ ತರಗತಿ ನಡೆಸುವುದು ಎಂದು ತಿಳಿಸಲಾಗಿದೆ. 6 ಮತ್ತು 7ನೇ ತರಗತಿಯ ಮಕ್ಕಳಿಗೆ ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 1:30 ರ ವರೆಗೆ 15 ರಿಂದ 20 ಮಕ್ಕಳ ತಂಡ ರಚಿಸಿ ಪಾಠ ಮಾಡಬೇಕು. ಪಾಳಿ ಪದ್ಧತಿಯಲ್ಲಿ ಮಕ್ಕಳಿಗೆ ‌ಪಾಠ ನಡೆಯಬೇಕು. ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕು ಹಾಗೂ ವಲಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಶಾಲೆ ಪ್ರಾರಂಭ ಮಾಡಬೇಕು.
ಕೊರೊನಾ ಸೋಂಕಿನ ಆರ್ಭಟ ಕಡಿಮೆ ಇರುವ ಸ್ಥಳಗಳಲ್ಲಿ ಮಾತ್ರ ಶಾಲೆಗಳು ತೆರೆಯಲಿದೆ. ಉಳಿದ ಪ್ರದೇಶಗಳ ಮಕ್ಕಳು ಕಾಯಬೇಕಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement