ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನ ಗುಂಡಿಕ್ಕಿ ಕೊಲೆ: ಫುಡ್ ಡೆಲಿವರಿ ಬಾಯ್, ಮತ್ತಿಬ್ಬರ ಬಂಧನ..!

ನವದೆಹಲಿ: ಆರ್ಡರ್​ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್​ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಸುನೀಲ್​ ಅಗರ್​ವಾಲ್​ ಎಂದು ಗುರುತಿಸಲಾಗಿದೆ.ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿದ್ದರೂ ಪೂರಿ, ಸಬ್ಜಿ ಪಾರ್ಸಲ್ ರೆಡಿ ಆಗಿರಲಿಲ್ಲ. ಅದನ್ನು ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್‍ನವರು ಹೇಳಿದ್ದರು. ಇದೇ ವಿಷಯಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು. ಈ ವೇಳೆ ಇನ್ನೂ ಮೂವರು ಇದೇ ರೆಸ್ಟಾರೆಂಟ್​ ಬಳಿ ನಿಂತಿದ್ದರು. ಇದೇ ವೇಳೆ ಮೂವರು ರೆಸ್ಟಾರೆಂಟ್​ ಸಿಬ್ಬಂದಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಈ ವಾಗ್ವಾದ ತಾರಕಕ್ಕೇರಿದ್ದು ಸುನೀಲ್​ ಅಗರ್​ವಾಲ್​ನನ್ನು ಗುಂಡಿಕ್ಕಿ ಕೊಲೆಗೈಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೂಡಲೇ ಸುನೀಲ್​ರನ್ನು ರೆಸ್ಟಾರೆಂಟ್​ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಸುನೀಲ್​ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರೆಸ್ಟಾರೆಂಟ್​ ಸಮೀಪದಲ್ಲೇ ವಾಸವಿರುವ ರಾಕೇಶ್​ ನಾಗರ್​, ರೆಸ್ಟಾರೆಂಟ್​ ಸಿಬ್ಬಂದಿ ನನಗೆ ಘಟನೆ ಬಗ್ಗೆ ಮಾಹಿತಿ ನೀಡಿದರು. . ನಾನು ರೆಸ್ಟಾರೆಂಟ್​ ತಲುಪುವ ವೇಳೆ ಅವರಿನ್ನೂ ಉಸಿರಾಡುತ್ತಿದ್ದರು. ನಾನು ಪೊಲೀಸರಿಗೆ ಮಾಹಿತಿ ನೀಡಿ ಆಯಂಬುಲೆನ್ಸ್​ಗೆ ಕರೆ ಮಾಡಿದೆ. ಬಳಿಕ ನಾವು ನಮ್ಮ ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಎಂದು ಹೇಳಿದ್ದಾರೆ.
ಪರಾರಿಯಾಗಿದ್ದ ಮೂವರನ್ನು ಪೊಲೀಸರು ಗುಂಡುಹಾರಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement