ಭೂಗತ ಗಣಿಯಲ್ಲಿ ಕಾರ್ಯನಿರ್ವಹಿಸುವ ದೇಶದ ಮೊದಲ ಮಹಿಳಾ ಎಂಜಿನಿಯರ್ ಆಕಾಂಕ್ಷಾಕುಮಾರಿ

ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್‌ನ ಆಕಾಂಕ್ಷಾಕುಮಾರಿ ಕೋಲ್ ಇಂಡಿಯಾ ಲಿಮಿಟೆಡ್ (CIL) ಗೆ ನೇಮಕವಾದ ದೇಶದ ಮೊದಲ ಮಹಿಳಾ ಗಣಿ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕಾಂಕ್ಷಾಕುಮಾರಿ ಉತ್ತರ ಕರಣಪುರದ ಛುರಿ ಭೂಗತ ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ಮೊದಲ ಸಲ ಗಣಿಗಾರಿಕೆಯ ಚಟುವಟಿಕೆಗಳಲ್ಲಿಯೇ ಅತಿ ಬೃಹತ್‌ ಕಂಪನಿಯಾಗಿರುವ ಸಿಸಿಎಲ್‌ ಜಾಗತಿಕವಾಗಿಯೂ ಒಂದು ಮೈಲಿಗಲ್ಲನ್ನು ಸೃಷ್ಟಿಸಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಣಿಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿರುವ ಎರಡನೆಯ ಎಂಜಿನಿಯರ್‌ ಆಕಾಂಕ್ಷಾ ಆಗಿದ್ದಾರೆ. ಇನ್ನೊಬ್ಬರು ಮಹಾರತ್ನ ಕೋಲ್ ಇಂಡಿಯಾ ಸಮೂಹ ಸಂಸ್ಥೆಯಲ್ಲಿ ಒಬ್ಬರು ಮಹಿಳಾ ಗಣಿಗಾರಿಕೆಯ ಕ್ಷೇತ್ರದಲ್ಲಿ ಎಂಜಿನಿಯರ್‌ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡದಹಜಾರಿಬಾಗ್‌ ಜಿಲ್ಲೆಯ ಬರ್ಕಾಗಾಂವ್‌ ಮೂಲದವರು ಆಕಾಂಕ್ಷಾ ಕುಮಾರಿ, ನವೋದಯ ವಿದ್ಯಾಲಯದ ವಿದ್ಯಾರ್ಥಿನಿ. ಗಣಿಗಾರಿಕೆಯ ಪ್ರದೇಶದಿಂದಲೇ ಬಂದಿರುವ ಆಕಾಂಕ್ಷಾ, ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿ ಶ್ರಮಿಸುವ ಕನಸು ಕಂಡವರು. ಈ ಕನಸು ಧನಬಾದ್‌ನ ಸಿಂದ್ರಿ ಸಂಸ್ಥೆಯಲ್ಲಿ ಬಿಐಟಿ ಮೈನಿಂಗ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ಸಿಸಿಎಲ್‌ನಲ್ಲಿ ಸೇವೆಗೆ ಸೇರುವ ಮುನ್ನ ಅವರು ರಾಜಸ್ಥಾನದ ಬಲಾರಿಯಾ ಗಣಿಪ್ರದೇಶದಲ್ಲಿ ಹಿಂದುಸ್ತಾನ್‌ ಜಿಂಕ್‌ ಲಿಮಿಟೆಡ್‌ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿರುವ ಅನುಭವ ಇದೆ. ಕೋಲ್‌ ಇಂಡಿಯಾ ಲಿಮಿಟೆಡ್‌ಗೆ ಸೇವೆ ಸಲ್ಲಿಸಲು ಸೇರುವುದು ತಮ್ಮ ಬಾಲ್ಯದ ಕನಸಾಗಿತ್ತು. ಸಾಮರ್ಥ್ಯಮೀರಿ ಶ್ರಮಿಸಿ, ತಮ್ಮಿಂದ ಉತ್ತಮವಾದುದನ್ನೇ ನೀಡುವುದಾಗಿ ಅವರು ಹೇಳುತ್ತಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement