ಮಹದಾಯಿ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ವೀರೇಶ ಸೊಬರದಮಠ ನೇತೃತ್ವದ ನಿಯೋಗ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದ ನಿಯೋಗವು ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.
ಉತ್ತರ ಕರ್ನಾಟಕದ ಬಾಗದ ನಾಲ್ಕು ಜಿಲ್ಲೆಗಳ ಹನ್ನೊಂದು ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆಗೆ “ಕೇಂದ್ರ ಸರ್ಕಾರ” ಗೆಜೇಟ್” ನೊಟಿಫಿಕೇಷನ್ ಹೊರಡಿಸಿದರೂ ಕಾಮಗಾರಿಗೆ ಚಾಲನೆ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಈ ಭಾಗದ ರೈತರಿಗೆ ನಿರಾಸೆಯಾಗಿದೆ. ಹೀಗಾಗಿ ಕೂಡಲೆ ತಾವುಗಳು ಕಾಮಗಾರಿಗೆ ಚಾಲನೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಮನವಿ ನೀಡಲಾಯಿತು.
ಅಲ್ಲದೆ, ಉತ್ತರ ಕರ್ನಾಟಕದ ಬಾಗದ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡುವಂತೆ “ಕೇಂದ್ರ ಸರ್ಕಾರ” ಗೆಜೇಟ್” ನೊಟಿಫಿಕೇಷನ್ ಹೊರಡಿಸಿದರು ಕೂಡಾ ಕಾಮಗಾರಿಗೆ ಚಾಲನೆ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಭ ಧೋರಣೆ ಅನುಸರಿಸುತ್ತಿರುವುದು ಈ ಭಾಗದ ರೈತರಿಗೆ ನಿರಾಸೆಯಾಗಿದೆ ಕಾರಣ, ರಾಜ್ಯದ ಪ್ರಥಮ ಪ್ರಜೆಗಳಾದ ತಮಲ್ಲಿ “ರೈತರ” ಪರವಾಗಿ ಬೇಡಿಕೊಳ್ಳುವುದೆನೇಂದರೆ ಕೂಡಲೆ ತಾವುಗಳು ಕಾಮಗಾರಿಗೆ ಚಾಲನೆ ನೀಡುವಂತೆ ರಾಜ್ಯ ಸರಕಾರಕ್ಕೆ ರಾಜ್ ಭವನದಲ್ಲಿ ರಾಜ್ಯಪಾಲರನ್ನು ಖುದ್ದಾಗಿ ರೈತರ ನಿಯೋಗ ಬೆಟಿಯಾಗಿ ಸನ್ಮಾನಿಸಿ “ಮನವಿ” ಸಲ್ಲಿಸಲಾಯಿತು……..!!
ನಿಯೋಗದಲ್ಲಿ ಮಲ್ಲಿಕಾರ್ಜುನ ಆಲೇಕರ್ , ಗುರು ರಾಯನಗೌಡ್ರ , ಶಿದ್ದಲಿಂಗೇಶ ಎಂ. ಪಾಟೀಲ್, ದೇವೇಂದ್ರಪ್ಪ ದ್ಯಾಪಲಿಸಿ,ಹಾಗೂ ಪ್ರಮುಖರು ಇದ್ದರು. ಅಲ್ಲದೆ, “ರೈತರು” ಬೆಳೆದ ಬೆಳೆಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಕೊಡಬೇಕು, ಶಾಶ್ವತ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದುಊ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement