ಆಗಸ್ಟ್‌ ತಿಂಗಳಲ್ಲೂ ಒಂದು ಲಕ್ಷ ಕೋಟಿ ದಾಟಿದ ಜಿಎಸ್ ಟಿ ಆದಾಯ ಸಂಗ್ರಹ

ನವದೆಹಲಿ: 2021ರ ಆಗಸ್ಟ್‌ನಲ್ಲಿ ಜಿ ಎಸ್.ಟಿಯಿಂದ 1,12,020 ಕೋಟಿ ರೂ.ಗಳಷ್ಟು ಆದಾಯ ಸಂಗ್ರಹವಾಗಿದೆ.
ಸಿ.ಜಿ.ಎಸ್.ಟಿ 20,522 ಕೋಟಿ ರೂ, ಎಸ್.ಜಿ.ಎಸ್.ಟಿ 20,605 ಕೋಟಿ ರೂ, 56,246 ಕೋಟಿ ರೂ ಐ.ಜಿ.ಎಸ್.ಟಿ (ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 26,884 ಕೋಟಿ ರೂ ಒಳಗೊಂಡಂತೆ) ಮತ್ತು ಸೆಸ್ ರೂಪದಲ್ಲಿ 8,646 ಕೋಟಿ ರೂ (ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 646 ಕೋಟಿ ರೂ ಸೇರಿ) ಸಂಗ್ರಹವಾಗಿದೆ.
ಸರ್ಕಾರ ಸಿ.ಜಿ.ಎಸ್.ಟಿಗೆ 23,043 ಕೋಟಿ ರೂ. ಮತ್ತು ಐ.ಜಿ.ಎಸ್.ಟಿಯಿಂದ ಎಸ್.ಜಿ.ಎಸ್.ಟಿ.ಗೆ 19,139 ಕೋಟಿ ರೂ ಮೊತ್ತವನ್ನು ನಿಯಮಿತವಾಗಿ ಪರಿಹಾರದ ರೂಪದಲ್ಲಿ ಇತ್ಯರ್ಥಪಡಿಸಿದೆ. ಕೇಂದ್ರ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50 ರ ಅನುಪಾತದಲ್ಲಿ ಐ.ಜಿ.ಎಸ್.ಟಿ ಯಲ್ಲಿ ತಾತ್ಕಾಲಿಕ ಪರಿಹಾರದ ರೂಪವಾಗಿ ಕೇಂದ್ರ 24,000 ಕೋಟಿ ರೂ ಇತ್ಯರ್ಥಪಡಿಸಿದೆ. 2021 ರ ಆಗಸ್ಟ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ನಿಯಮಿತ ಮತ್ತು ತಾತ್ಕಾಲಿಕ ಆದಾಯ ಹಂಚಿಕೆಯಲ್ಲಿ ಸಿ.ಜಿ.ಎಸ್.ಟಿಗೆ 55,565 ಕೋಟಿ ರೂ ಮತ್ತು ಎಸ್.ಜಿ.ಎಸ್.ಟಿಗೆ 57,744 ಕೋಟಿ ರೂ ನೀಡುವುದನ್ನು ಇತ್ಯರ್ಥಪಡಿಸಿದೆ.
2021 ರ ಆಗಸ್ಟ್‌ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ30 ರಷ್ಟು ಹೆಚ್ಚು ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ದೇಶೀಯ ವಹಿವಾಟಿನ ಎಲ್ಲಾ ಮೂಲಗಳಿಂದ ಶೇ 27 ರಷ್ಟು ಹೆಚ್ಚು ಆದಾಯ ಬಂದಿದೆ. 2019-20 ರ ಸಾಲಿನ ಆಗಸ್ಟ್‌ನಲ್ಲಿ 98,202 ಕೋಟಿ ರೂ ಸಂಗ್ರಹವಾಗಿತ್ತು, ಆದರೆ ಕಳೆದ ಜುಲೈ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.
ಕಳೆದ 9 ತಿಂಗಳಿಂದ ಜಿ.ಎಸ್.ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ ದಾಟುತ್ತಿದ್ದು, 2021 ರ ಜೂನ್ ನಲ್ಲಿ ಕೋವಿಡ್ ಎರಡನೇ ಅಲೆ ಕಾರಣ ಒಂದು ಲಕ್ಷ ಕೋಟಿ ರೂಗಿಂತ ಕಡಿಮೆ ಸಂಗ್ರಹವಾಗಿತ್ತು. ಕೋವಿಡ್ ನಿಯಂತ್ರಣಗಳನ್ನು ಸುಗಮಗೊಳಿಸಿದ ಕಾರಣ ಜುಲೈ ಮತ್ತು ಆಗಸ್ಟ್‌ನಲ್ಲಿ ಒಂದು ಲಕ್ಷ ಕೋಟಿ ರೂ ಗಿಂತ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸ್ಪಷ್ಟ ಸಂಕೇವಾಗಿದೆ. ಮುಂಬರುವ ತಿಂಗಳುಗಳಲ್ಲಿಯೂ ಜಿ.ಎಸ್.ಟಿ.ಯ ದೃಢವಾದ ಆದಾಯ ಮುಂದುವರಿಯುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement