ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ ಜೆಡಿಯು ಶಾಸಕ..!: ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ ಮಂಡಲ

ಪಾಟ್ನಾ: ಬಿಹಾರದ ಜೆಡಿಯು ಶಾಸಕರೊಬ್ಬರು ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಕಾಣಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಬಿಹಾರದ ಜೆಡಿಯು ಶಾಸಕರಾದ ಗೋಪಾಲ್ ಮಂಡಲ್ (JDU MLA Gopal Mandal) ಅವರು ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ್ದಕ್ಕೆ ಸಹ ಪ್ರಯಾಣಿಕರು ಆಕ್ಷೇಪಿಸಿದ್ದಾರೆ.
ಶಾಸಕ ಗೋಪಾಲ್ ಮಂಡಲ್ ಅವರು ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನ ಮೊದಲ ಎಸಿ ಕಂಪಾರ್ಟ್ಮೆಂಟ್‌ನಲ್ಲಿ ಪಾಟ್ನಾದಿಂದ ನವದೆಹಲಿಗೆ ಪ್ರಯಾಣಿಸುವಾಗ ಹೊರ ಉಡುಪು ಇಲ್ಲದೆ ಕಾಣಿಸಿಕೊಂಡಿರುವ ಫೋಟೋಗಳು ಈಗ ವೈರಲ್‌ ಆಗಿವೆ. ಸಹ ಪ್ರಯಾಣಿಕರು ಎಂಎಲ್‌ಎ ಈ ತರಹದ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಶಾಸಕರು ಮತ್ತು ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ.
ಕೆಲ ಪ್ರಯಾಣಿಕರು ಆಕ್ಷೇಪ ಎತ್ತಿದಾಗ ಶಾಸಕರು ಅವರ ಮಧ್ಯೆ ವಾಗ್ವಾದ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಶ್ನಿಸಿದ ಸಹ ಪ್ರಯಾಣಿಕರಿಗೆ ಆವಾಜ್‌ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ರೈಲ್ವೆ ಪೊಲೀಸ್ ಪಡೆ (RPF) ಮತ್ತು ಪ್ರಯಾಣದ ಟಿಕೆಟ್ ಪರೀಕ್ಷಕರು (TTE) ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಾಸಕರನ್ನು ಎಕ್ಸ್‌ಪ್ರೆಸ್ ರೈಲಿನ ಇನ್ನೊಂದು ವಿಭಾಗಕ್ಕೆ ಸ್ಥಳಾಂತರಿಸಿದರು ಎಂದು ವರದಿಯಾಗಿದೆ.
ಘಟನೆ ಬಗ್ಗೆ ಮಾತನಾಡಿದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್, ಸಹ ಪ್ರಯಾಣಿಕರು ಶಾಸಕರ ವರ್ತನೆಯ ಬಗ್ಗೆ ದೂರು ನೀಡಿದರು. ಪೊಲೀಸರು, ಟಿಕೆಟ್ ಪರೀಕ್ಷಕರು ಸೇರಿ ಶಾಸಕರು ಹಾಗೂ ಸಹ ಪ್ರಯಾಣಿಕರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಶಾಸಕರ ಸ್ಪಷ್ಟನೆ
ಶಾಸಕ ಗೋಪಾಲ ಮಂಡಲ್ ತಾವು ಒಳ ಉಡುಪುಗಳಲ್ಲಿ ಇದ್ದ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಶಾಸಕ ಮಂಡಲ್ ಅವರು ತಮಗೆ ಹೊಟ್ಟೆಯ ಸಮಸ್ಯೆಯಾದ ಕಾರಣ ಶೌಚಾಲಯಕ್ಕೆ ಹೋಗಬೇಕಾದ ಧಾವಂತದಲ್ಲಿ ಬಟ್ಟೆಗಳನ್ನು ಅವಸರವಾಗಿ ತೆಗೆದು ಹೋಗಿದ್ದೆ, ಗಡಿಬಿಡಯ ಕಾರಣದಿಂದ ಟವಲ್​​ ಸುತ್ತಿಕೊಳ್ಳಲು ಆಗದೆ ಒಳ ಉಡುಪಿನಲ್ಲೇ ಶೌಚಾಲಯಕ್ಕೆ ಹೋದೆ ಎಂ ಹೇಳಿದ್ದಾರೆ.
ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಿಪಡಿಸಿದರು. ನಾನು ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅವರು ನನ್ನ ವಯಸ್ಸನ್ನು ನೋಡಬೇಕಿತ್ತು. ನನ್ನ ವಯಸ್ಸು 60 ಜೊತೆಗೆ ಕಂಪಾರ್ಟ್ಮೆಂಟ್ ಒಳಗೆ ಯಾವುದೇ ಮಹಿಳೆಯರು ಇರಲಿಲ್ಲ. ಮಹಿಳಾ ಪ್ರಯಾಣಿಕರಿದ್ದಾಗ ನಾನು ಒಳ ಉಡುಪಿನಲ್ಲಿ ಕಾಣಿಸಿಕೊಂಡಿದ್ದರೆ ತಪ್ಪಾಗುತ್ತಿತ್ತು ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement