ಟಿಎಂಸಿ ಸೇರಿದ ಬಿಜೆಪಿ ಶಾಸಕ ಸೌಮೆನ್ ರಾಯ್; 4 ವಾರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು ಪಕ್ಷಾಂತರ..!

ಕೋಲ್ಕತ್ತಾ: ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಉಪಚುನಾವಣೆಯ ದಿನಾಂಕ ಘೋಷಿಸಿದ ದಿನವೇ ಬಿಜೆಪಿ ಶಾಸಕ ಸೌಮೆನ್ ರಾಯ್ ಶನಿವಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿಗೆ ಸೇರಿದ್ದಾರೆ.
ಕಲಿಯಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಸೌಮೆನ್ ರಾಯ್ ಅವರು ಈ ಹಿಂದೆ ಟಿಎಂಸಿಯ ಸದಸ್ಯರಾಗಿದ್ದರು. “ಬಿಜೆಪಿ ಶಾಸಕ ಸೌಮೆನ್ ರಾಯ್ ಬಂಗಾಳ ಮತ್ತು ಉತ್ತರ ಬಂಗಾಳದ ಅಭಿವೃದ್ಧಿಗೆ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ” ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಹೇಳಿದ್ದಾರೆ.
ಸೌಮೆನ್ ರಾಯ್ ಟಿಎಂಸಿಗೆ ಸೇರಿದ ನಂತರ, ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 71 ಕ್ಕೆ ಇಳಿದಿದೆ. ಕಳೆದ ನಾಲ್ಕು ವಾರಗಳಲ್ಲಿ, ನಾಲ್ಕು ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಖಾಲಿ ಇರುವ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಶನಿವಾರ ಚುನಾವಣಾ ಆಯೋಗ ದಿನಾಂಕ ನಿಗದಿಗೊಳಿಸಿ ಘೋಷಿಸಿದೆ. ಸಮ್ಸೆರ್​ಗಂಜ್, ಜಂಗಿಪುರ್ ಹಾಗೂ ಭಬನಿಪುರ​ ಮೂರು ಕ್ಷೇತ್ರಗಳಿಗೆ ಸೆಪ್ಟೆಂಬರ್ 30ರಂದು ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 3ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಉಪಚುನಾವಣೆಯ ಘೋಷಣೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ವಿಧಾನಸಭೆಗೆ ಮರಳಲು ದಾರಿ ಮಾಡಿಕೊಡುತ್ತದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement