ಪಾಂಚಜನ್ಯ ಆರ್‌ಎಸ್‌ಎಸ್‌ ಮುಖವಾಣಿಯಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ’: ಆರ್‌ಎಸ್‌ಎಸ್‌

ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನೊಂದಿಗೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಲೇಖನದಿಂದ ಅಂತರ ಕಾಯ್ದುಕೊಂಡಿದೆ, ಅದು ಭಾರತೀಯ ಐಟಿ ದೈತ್ಯ ಇನ್ಫೋಸಿಸ್ ಅನ್ನು “ದೇಶವಿರೋಧಿಗಳೊಂದಿಗೆ ಸೇರಿಕೊಂಡಿದೆಯೇ ಎಂದು ಪ್ರಶ್ನಿಸಿದೆ” ಮತ್ತು ಆದಾಯ ತೆರಿಗೆಯಲ್ಲಿನ ದೊಡ್ಡ ತೊಡಕುಗಳ ಕಾರಣದಿಂದಾಗಿ ಅದನ್ನು ನಿರ್ಮಿಸಿದ ಪೋರ್ಟಲ್.”ತುಕ್ಡೆ ತುಕ್ಡೆ ಗ್ಯಾಂಗ್” ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ಎಂದೇ ಕರೆಯಲಾಗುವ ಪಾಂಚಜನ್ಯ ಇನ್ಫೋಸಿಸ್‌ ವಿರುದ್ದ ಆರೋಪವನ್ನು ಮಾಡಿದೆ. ಇನ್ಫೋಸಿಸ್‌ ದೇಶದ್ರೋಹಿಗಳೊಂದಿಗೆ ಸೇರಿಕೊಂಡಿದೆ. ತುಕ್ಡೆ ತುಕ್ಡೆ ಗ್ಯಾಂಗ್‌ ಜೊತೆ ಸೇರಿದೆ ಎಂದು ಪಾಂಚಜನ್ಯ ಹೇಳಿದೆ.
ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಪ್ರಕಟವಾದ ಈ ವರದಿಯನ್ನು ಹಲವಾರು ಮಂದಿ ಟೀಕೆ ಮಾಡಿದ್ದಾರೆ. ವರದಿಗೆ ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಈ ವಿವಾದದ ಬೆನ್ನಲ್ಲೇ ಈ ಬಗ್ಗೆ ಹೇಳಿಕೆ ನೀಡಿರುವ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನೀಲ್​ ಅಂಬೇಕರ್​, ”ಪಾಂಚಜನ್ಯ ಆರ್‌ಎಸ್‌ಎಸ್‌ನ ಮುಖವಾಣಿ ಅಲ್ಲ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನೀಲ್​ ಅಂಬೇಕರ್ ಟ್ವೀಟ್‌ ಮಾಡಿದ್ದು, “ಭಾರತೀಯ ಕಂಪನಿಯಾದ ಇನ್ಪೋಸಿಸ್‌, ಭಾರತದ ಪ್ರಗತಿಗೆ ತನ್ನದೇ ಆತ ಕೊಡುಗೆಯನ್ನು ನೀಡಿದೆ. ಇನ್ಪೋಸಿಸ್‌ ನಿರ್ವಹಣೆ ಮಾಡುವ ಪೋರ್ಟಲ್‌ಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಇರಬಹುದು. ಆದರೆ ಪಾಂಚಜನ್ಯದಲ್ಲಿ ಈ ಬಗ್ಗೆ ಪ್ರಕಟವಾದ ಲೇಖನಗಳು ಲೇಖಕರ ವೈಯಕ್ತಿಕ ದೃಷ್ಟಿಕೋನಗಳಾಗಿವೆ, ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
“ಪಾಂಚಜನ್ಯ ಆರ್‌ಎಸ್‌ಎಸ್‌ನ ಮುಖವಾಣಿಯಲ್ಲ. ಹಾಗಾಗಿ ಈ ವರದಿಯನ್ನು ಅಥವಾ ಅಭಿಪ್ರಾಯವನ್ನು ಆರ್‌ಎಸ್‌ಎಸ್‌ ಜೊತೆಗೆ ಸಂಬಂಧ ಕಲ್ಪಿಸಿಕೊಳ್ಳಬಾರದು,” ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

ಪ್ರಕಟವಾದ ಲೇಖನದಲ್ಲೇನಿದೆ?
ಆರ್‌ಎಸ್‌ಎಸ್‌ನ ಸಾಪ್ತಾಹಿಕ ಪತ್ರಿಕೆಯಾದ ಪಾಂಚಜನ್ಯದಲ್ಲಿ ‘ಸಾಖ್‌ ಔರ್‌ ಆಘಾತ್’ ಎಂಬ ಶೀರ್ಷಿಕೆಯಡಿ ಕವರ್ ಸ್ಟೋರಿಯೊಂದು ಪ್ರಕಟ ಮಾಡಲಾಗಿದೆ. ಈ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಇನ್ಫೋಸಿಸ್ ಕಂಪನಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶ ಪೂರ್ವಕ ಯತ್ನವನ್ನು ಮಾಡುತ್ತಿದೆ. ಅಲ್ಲದೇ ಈ ಕಂಪನಿಯು ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಆದಾಯ ತೆರಿಗೆ ಇಲಾಖೆಯು ರಿಟರ್ನ್ಸ್ ಸಲ್ಲಿಸಲು ರಚಿಸಿದ ಹೊಸ ವೆಬ್‌ಸೈಟ್‌ನ ನಿರ್ವಹಣೆಯ ಗುತ್ತಿಗೆಯನ್ನು ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ಗೆ ನೀಡಲಾಗಿದೆ. ಆದರೆ ಈ ವೆಬ್‌ಸೈಟ್‌ ಕೆಲಸ ಮಾಡುತ್ತಿಲ್ಲ. ಇನ್ಪೋಸಿಸ್‌ ‘ದೊಡ್ಡ ಅಂಗಡಿ, ಕೆಟ್ಟ ತಿಂಡಿ’ ಮತ್ತು ‘ಹೆಸರು ದೊಡ್ಡದಾಗಿದ್ದರೂ, ಕೆಲಸ ಚಿಕ್ಕದು’ ಎಂಬಂತೆ ವರ್ತನೆ ಮಾಡುತ್ತಿದೆ. ಇನ್ಪೋಸಿಸ್‌ನಂತಹ ಈ ದೊಡ್ಡ ಕಂಪನಿಗಳು ಸಾಮಾನ್ಯ ಕೆಲಸವನ್ನು ಮಾಡಲು ಕೂಡಾ ಯಾಕಿಷ್ಟು ಅಜಾಗರೂಕತೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರಶ್ನಿಸಲಾಗಿದೆ.
ಹಾಗೆಯೇ “ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಸಾಮಾನ್ಯವೇ ಅಥವಾ ಇದರ ಹಿಂದೆ ಉದ್ದೇಶಪೂರ್ವಕ ಪಿತೂರಿ ಇದೆಯೇ ,” ಎಂದು ಕೂಡಾ ಪ್ರಶ್ನೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement