ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ:ಬಿಜೆಪಿ ಭರ್ಜರಿ ಗೆಲುವು, ಗೆದ್ದ ಅಭ್ಯರ್ಥಿಗಳ ವಾರ್ಡ್‌ ವಾರು ಪಟ್ಟಿ

 

ಬೆಳಗಾವಿ :ಬೆಳಗಾವಿ ನಹಾನಗರ ಪಾಲಿಕೆ ಚುನಾವಣೆಯ 58 ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ ಹಾಗೂ ಪಾಲಿಯಲ್ಲಿ ಕಳೆದ ಕೆಲವು ದಶಕಗಳಿಂದ ಪ್ರಾಬಲ್ಯ ಸಾಧಿಸಿದ್ದ ಎಂಇಎಸ್‌ ಹೀನಾಯವಾಗಿ ಸೋತಿದೆ.
ಇದೇ ಪ್ರಥಮ ಬಾರಿಗೆ ವಿವಿಧ ರಾಜಕೀಯ ಪಕ್ಷಗಳು ಕಣಕ್ಕಿಳಿದು ರಾಜ್ಯದ ಗಮನಸೆಳೆದಿದ್ದ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನೆಲ ಕಚ್ಚಿದೆ.
ಎಂಇಎಸ್‌ ಬೆಂಬಲಿತರು 23 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದರು. ಅದರಲ್ಲಿ ಎರಡು ಕಡೆಗಳಲ್ಲಷ್ಟೆ ಗೆಲುವು ಸಾಧಿಸಿದ್ದಾರೆ. 7 ವಾರ್ಡ್‌ಗಳಲ್ಲಿ ಕಣಕ್ಕಿಳಿದಿದ್ದ ಎಐಎಂಐಎಂ ಖಾತೆ ತೆರೆದಿದೆ. 27ರಲ್ಲಿ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷ(ಎಎಪಿ)ದವರಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.
55 ವಾರ್ಡ್‌ಗಳಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯು 35 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಬೆಳಗಾವಿ ನಗರದ ಮತದಾರರು ಭಾಷಾ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಹಾಗೂ ಭಾಷಾ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದ ನೆರೆಯ ಮಹಾರಾಷ್ಟ್ರ ಸರ್ಕಾರಕ್ಕೂ ಸ್ಪಷ್ಟವಾದ ಸಂದೇಶವನ್ನೂ ರವಾನಿಸಿದ್ದಾರೆ. ಮರಾಠಿ ಭಾಷಿಕರ ಮತವನ್ನು ಸೆಳೆಯುವಲ್ಲಿ ಬಿಜೆಪಿಯವರು ಯಶಸ್ವಿಯಾಗಿದ್ದಾರೆ. ಎಂಇಎಸ್‌ನವರು ಪ್ರಯೋಗಿಸಿದ್ದ ‘ಎಂ ಪ್ಲಸ್ ಎಂ’ (ಮರಾಠಿ ಮತ್ತು ಮುಸ್ಲಿಂ) ಸೂತ್ರಕ್ಕೆ ಮತದಾರರು ಮನ್ನಣೆ ನೀಡಿಲ್ಲ.

ವಾರ್ಡ್ -1-ಇಕ್ರಾ ಮುಲ್ಲಾ-ಪಕ್ಷೇತರ
ವಾರ್ಡ್-2- ಮುಜಾಮಿಲ್ ಡೋಣಿ- ಕಾಂಗ್ರೆಸ್
ವಾರ್ಡ್-3- ಜ್ಯೋತಿ ಕಡೋಲ್ಕರ್-ಕಾಂಗ್ರೆಸ್
ವಾರ್ಡ್-4- ಜಯತೀರ್ಥ ಸವದತ್ತಿ- ಬಿಜೆಪಿ
ವಾರ್ಡ್-5- ಅಪ್ರೋಜ್ ಮುಲ್ಲಾ- ಕಾಂಗ್ರೆಸ್
ವಾರ್ಡ್-6- ಸಂತೋಷ್ ಪೆಡ್ನೇಕರ್-ಬಿಜೆಪಿ
ವಾರ್ಡ್-7- ಶಂಕರ್ ಪಾಟೀಲ್- ಪಕ್ಷೇತರ
ವಾರ್ಡ್-8- ಸೊಹೈಲ್ ಸಂಗೊಳ್ಳಿ- ಕಾಂಗ್ರೆಸ್
ವಾರ್ಡ್-9- ಪೂಜಾ ಪಾಟೀಲ್- ಪಕ್ಷೇತರ
ವಾರ್ಡ್-10- ವೈಶಾಲಿ ಭಾತಕಾಂಡೆ- ಎಂಇಎಸ್
ವಾರ್ಡ್-11- ಸಮೀವುಲ್ಲಾ ಮಾಡಿವಾಲೆ- ಕಾಂಗ್ರೆಸ್
ವಾರ್ಡ್-12- ಮದೀನಸಾಬ ಮತವಾಲೆ- ಪಕ್ಷೇತರ
ವಾರ್ಡ್-13- ರೇಷ್ಮಾ ಬೈರಕರ್- ಕಾಂಗ್ರೆಸ್
ವಾರ್ಡ್-14- ಶಿವಾಜಿ ಮಂಡೊಳಕರ್ -ಎಂಇಎಸ್
ವಾರ್ಡ್-15- ನೇತ್ರಾವತಿ ಭಾಗವತ್- ಬಿಜೆಪಿ
ವಾರ್ಡ್-16- ರಾಜು ಭಾತಕಂಡೆ- ಬಿಜೆಪಿ
ವಾರ್ಡ್-17- ಕಾಂಬ್ಳೆ ಸವಿತಾ ಜಯಪಾಲ- ಬಿಜೆಪಿ
ವಾರ್ಡ್-18-ಶಾಯಿ ಖಾನ್ ಪಠಾಣ್- ಎಐಎಂಐಎಂ
ವಾರ್ಡ್-19- ರಿಯಾಜ್ ಕಿಲ್ಲೇದಾರ- ಕಾಂಗ್ರೆಸ್
ವಾರ್ಡ್-20-ಶಕೀಲ್ ಮುಲ್ಲಾ- ಕಾಂಗ್ರೆಸ್
ವಾರ್ಡ್-21- ಪ್ರೀತಿ ವಿನಾಯಕ ಕಾಮಕರ್- ಬಿಜೆಪಿ
ವಾರ್ಡ್-22- ರವಿ ಸಾಂಬ್ರೇಕರ- ಬಿಜೆಪಿ
ವಾರ್ಡ್-23- ಜಯಂತ ಜಾಧವ- ಬಿಜೆಪಿ
ವಾರ್ಡ್-24- ಗಿರೀಶ್ ಧೋಂಗಡಿ- ಬಿಜೆಪಿ
ವಾರ್ಡ್-25- ಜರೀನ ಫತೆಖಾನ -ಪಕ್ಷೇತರ
ವಾರ್ಡ್-26- ರೇಖಾ ಹೂಗಾರ- ಬಿಜೆಪಿ
ವಾರ್ಡ್-27- ರವಿ ಸಾಳುಂಕೆ- ಎಂಇಎಸ್
ವಾರ್ಡ್-28- ರವಿ ಧೋತ್ರೆ-ಬಿಜೆಪಿ
ವಾರ್ಡ್-29- ನಿತಿನ್ ‌ಜಾಧವ್- ಬಿಜೆಪಿ
ವಾರ್ಡ್-30- ಬ್ರಹ್ಮಾನಂದ ಮಿರಜಕರ್- ಬಿಜೆಪಿ
ವಾರ್ಡ್-31- ವೀಣಾ ವಿಜಾಪುರೆ- ಬಿಜೆಪಿ
ವಾರ್ಡ್-32- ಸಂದೀಪ್ ಜೀರಗಿಹಾಳ- ಬಿಜೆಪಿ
ವಾರ್ಡ್-33- ರೇಷ್ಮಾ ಪಾಟೀಲ್- ಬಿಜೆಪಿ
ವಾರ್ಡ್-34- ಇಜಾಜ್ ಖಾನ್-ಕಾಂಗ್ರೆಸ್
ವಾರ್ಡ್-35- ಲಕ್ಷ್ಮೀ ರಾಠೋಡ್- ಬಿಜೆಪಿ
ವಾರ್ಡ್-36- ರಾಜಶೇಖರ್ ಡೋಣಿ- ಬಿಜೆಪಿ
ವಾರ್ಡ್-37- ಶಾಮೋಮಿನ ಪಠಾಣ- ಕಾಂಗ್ರೆಸ್
ವಾರ್ಡ್-38- ಅಜಿಮ್ ಪಟ್ವೇಗಾರ- ಪಕ್ಷೇತರ
ವಾರ್ಡ್-39- ಉದಯಕುಮಾರ್ ಉಪರಿ- ಬಿಜೆಪಿ
ವಾರ್ಡ್-40- ರೇಷ್ಮಾ ಕಾಮಕರ್- ಬಿಜೆಪಿ
ವಾರ್ಡ್-41- ಮಂಗೇಶ ಪವಾರ್- ಬಿಜೆಪಿ
ವಾರ್ಡ್-42-ಅಭಿಜಿತ್ ಜವಳಕರ್- ಬಿಜೆಪಿ
ವಾರ್ಡ್-43- ವಾಣಿ ವಿಲಾಸ ಜೋಶಿ- ಬಿಜೆಪಿ
ವಾರ್ಡ್-44- ಆನಂದ ಚವ್ಹಾಣ್-ಬಿಜೆಪಿ
ವಾರ್ಡ್-45- ರೂಪಾ ಚಿಕ್ಕಲದಿನ್ನಿ
ವಾರ್ಡ್-46- ಹನುಮಂತ ಕೊಂಗಾಲಿ- ಬಿಜೆಪಿ
ವಾರ್ಡ್-47- ಅಸ್ಮಿತಾ ಪಾಟೀಲ್- ಪಕ್ಷೇತರ
ವಾರ್ಡ್-48- ಬಸವರಾಜ್ ಮೊದಗೆಕರ್-ಸ್ವತಂತ್ರ
ವಾರ್ಡ್-49- ದೀಪಾಲಿ ಸಂತೋಷ ಟೋಪಗಿ-ಬಿಜೆಪಿ
ವಾರ್ಡ್-50- ಸಾರಿಕಾ ಪಾಟೀಲ-ಬಿಜೆಪಿ
ವಾರ್ಡ್-51- ಶ್ರೀ ಶೈಲ್ ಕಾಂಬಳೆ -ಬಿಜೆಪಿ
ವಾರ್ಡ್-52- ಖುರ್ಷಿದ ಮುಲ್ಲಾ- ಕಾಂಗ್ರೆಸ್
ವಾರ್ಡ್-53- ರಮೇಶ್ ಮಾಲಿಗೋಳ-ಬಿಜೆಪಿ
ವಾರ್ಡ್-54- ಮಾಧವಿ ರಾಘೋಟಿ- ಬಿಜೆಪಿ
ವಾರ್ಡ್-55- ಸವಿತಾ ಪಾಟೀಲ್-ಬಿಜೆಪಿ
ವಾರ್ಡ್-56- ಲಕ್ಷ್ಮಿ ಲೋಕರಿ-ಪಕ್ಷೇತರ
ವಾರ್ಡ್-57-ಶೋಭಾ ಸೋಮನಾಚೆ-ಬಿಜೆಪಿ
ವಾರ್ಡ್-58- ಪ್ರಿಯಾ ದೀಪಕ್ ಸಾತಗೌಡ- ಬಿಜೆಪಿ

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement