ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್​​ ದೇಶಮುಖ್​ ಹೆಸರಲ್ಲಿ ಲುಕ್​ ಔಟ್​ ನೋಟೀಸ್ ಹೊರಡಿಸಿದ ಇಡಿ

ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್​ ದೇಶಮುಖ್​ ಆರ್ಥಿಕ ಅಪರಾಧಗಳ ಆರೋಪದ ಬಗ್ಗೆ ತನಿಖೆ ನಡೆಸುವ ಎಜಾರಿ ನಿರ್ದೇಶನಾಲಯ ​(ಇಡಿ) ಲುಕ್​ ಔಟ್​ ನೋಟೀಸ್​ ಹೊರಡಿಸಿದೆ.
ಹಲವು ಸಮನ್ಸ್​ಗಳಿಗೆ ದೇಶಮುಖ್​ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಈ ನೋಟೀಸ್​ ಜಾರಿಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ನಾಯಕರಾದ ದೇಶ್​ಮುಖ್​ ವಿರುದ್ಧ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ(ಮನಿ ಲಾಂಡರಿಂಗ್)​ ಆರೋಪದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ವಿಚಾರಣೆಗಾಗಿ ಹಾಜರಾಗುವಂತೆ ಅವರಿಗೆ ಹಲವು ಸಮನ್ಸ್​ ಜಾರಿಗೊಳಿಸಿದ್ದರೂ ಈವರೆಗೆ ಭೌತಿಕ ಹಾಜರಾತಿ ನೀಡಿಲ್ಲ. ಸುಪ್ರೀಂ ಕೋರ್ಟ್​ನಲ್ಲಿ ಈ ಬಗ್ಗೆ ತಾವು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಮುಗಿಯುವವರೆಗೆ ಇಡಿ ಮುಂದೆ ಬರುವುದಿಲ್ಲವೆಂದು ಹೇಳಿರುವ ದೆಶ್​ಮುಖ್​, ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಮ್ಮ ಹೇಳಿಕೆ ದಾಖಲಿಸಲು ಸಿದ್ಧರಿರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ದೇಶಮುಖ್​ರ ಸಹಾಯಕ ಕುಂದನ್​ ಶಿಂದೆ ಮತ್ತು ಆಪ್ತ ಕಾರ್ಯದರ್ಶಿ ಸಂಜೀವ್ ಪಾಲಂದ್ ಅವ​ರನ್ನು ಬಂಧಿಸಿರುವ ಇಡಿ ವಿಚಾರಣೆ ನಡೆಸಿದೆ, ಅವರ ವಿರುದ್ಧ ಅದಾಗಲೇ ಮನಿ ಲಾಂಡರಿಂಗ್​ನಲ್ಲಿ ಸಹಾಯ ಮಾಡಿರುವುದಾಗಿ ಚಾರ್ಜ್​ಶೀಟ್​ ಸಲ್ಲಿಸಿದೆ. ಇದೇ ಸೆಪ್ಟೆಂಬರ್ 3 ರಂದು ದೇಶ್​ಮುಖ್​ರ ವಕೀಲರ ತಂಡದ ಸದಸ್ಯ ಆನಂದ್​ ದಾಗಾ ಅವರನ್ನು ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಆರೋಪದ ಮೇಲೆ ಸಿಬಿಐ ಬಂಧಿಸಿದೆ.ಮಾಜಿ ಸಚಿವರಿಗೆ ಸುಪ್ರೀಂ ಕೋರ್ಟ್​ ಈವರೆಗೆ ಮಧ್ಯಂತರ ಪರಿಹಾರ ನೀಡಿಲ್ಲ.
ಮಹಾರಾಷ್ಟ್ರದ ಗೃಹ ಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಕೆಲವು ಪೊಲೀಸ್​ ಅಧಿಕಾರಿಗಳ ಮೂಲಕ ಮುಂಬೈನ ಬಾರ್​ಗಳಿಂದ ಕೋಟ್ಯಂತರ ರೂ.ಗಳನ್ನು ವಸೂಲಿ ಮಾಡಿರುವುದಾಗಿ ದೇಶ್​ಮುಖ್​ ಅವರ ಮೇಲೆ ಮುಂಬೈನ ಹಿಂದಿನ ಪೊಲೀಸ್‌ ಆಯುಕ್ತರಾಗಿದ್ದ ಪರಮ್‌ ಬೀರ್‌ ಸಿಂಗ್‌ ಅವರು ಆರೋಪಿಸಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು. ಇದು ಭಾರೀ ದೊಡ್ಡ ಸುದ್ದಿಯಾಗಿತ್ತು. ಈ ನಿಟ್ಟಿನಲ್ಲಿ ಸಿಬಿಐ ಏಪ್ರಿಲ್​ 21 ಕ್ಕೆ ಎಫ್​ಐಆರ್​ ದಾಖಲಿಸಿದ ನಂತರ, ಇಡಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement