ದಿಶಾ ಪ್ರಕರಣ’ದಲ್ಲಿ ಅತ್ಯಾಚಾರ ಸಂತ್ರಸ್ತೆ ಗುರುತು ಬಹಿರಂಗ: 38 ಬಾಲಿವುಡ್ -ಟಾಲಿವುಡ್ ನಟರ ವಿರುದ್ಧ ದೂರು ದಾಖಲು

ನವದೆಹಲಿ; ಹೈದರಾಬಾದ್‌ ಹೊರವಲಯದಲ್ಲಿ ಪಶುವೈದ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಜೀವಂತ ಸುಟ್ಟು ಹಾಕಿದ ಎರಡು ವರ್ಷಗಳಾಗಿವೆ. ಭಯಾನಕ “ದಿಶಾ ಅತ್ಯಾಚಾರ ಪ್ರಕರಣ” ನಮ್ಮ ನೆನಪಿನಲ್ಲಿ ಇನ್ನೂ ತಾಜಾವಾಗಿದ್ದರೂ, ದೆಹಲಿ ಮೂಲದ ವಕೀಲರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ನೈಜ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಟಾಲಿವುಡ್ ಮತ್ತು ಬಾಲಿವುಡ್‌ನ 38 ಚಲನಚಿತ್ರ ಸೆಲೆಬ್ರಿಟಿಗಳನ್ನು ಬಂಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಅನುಪಮ್ ಖೇರ್, ಫರ್ಹಾನ್ ಅಖ್ತರ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಮಹಾರಾಜ ರವಿತೇಜಾ, ರಾಕುಲ್ ಪ್ರೀತ್ ಸಿಂಗ್, ಅಲ್ಲು ಸಿರೀಶ್, ಚಾರ್ಮಿ ಕೌರ್ ಮತ್ತು ಇತರ ಖ್ಯಾತನಾಮರ ಹೆಸರನ್ನು ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ. ಘ
ಈ ಪ್ರಕರಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವ್ಯಕ್ತಪಡಿಸುವ ಭರದಲ್ಲಿ ಸೆಲೆಬ್ರೆಟಿಗಳು ಅತ್ಯಾಚಾರ ಸಂತ್ರಸ್ತೆಯ ನಿಜವಾದ ಹೆಸರು, ಊರು ವಿಳಾಸ ದಾಖಲಿಸುವ ಮೂಲಕ ನಿಯಮ ಉಲ್ಲಂಘಿಸಿದ್ದರು ಎಂಬ ಆರೋಪದ ಮೇಲೆ .
ದೆಹಲಿ ಮೂಲದ ಗೌರವ್ ಗುಲಾಟಿ ಎಂಬ ವಕೀಲರು,38 ಚಲನಚಿತ್ರ ಸೆಲೆಬ್ರಿಟಿಗಳ ವಿರುದ್ಧ ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement