9 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರವೆಸಗಿದ ಶಾಲಾ ಹೆಡ್‌ ಮಾಸ್ಟರ್‌,..!

ಲಕ್ನೋ : ಉತ್ತರ ಪ್ರದೇಶದಲ್ಲಿ ಶಾಲೆಯೊಂದರಲ್ಲಿ 9 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ವಿಡಿಯೋ ಕ್ಲಿಪ್‌ ತೋರಿಸಿ ಅತ್ಯಾಚಾರವೆಸಗಿರುವ ಕುರಿತು ಶಾಲಾ ಮುಖ್ಯಾಧ್ಯಾಪಕರ ವಿರುದ್ಧವೇ ದೂರು ದಾಖಲಾದ ವರದಿಯಾಗಿದೆ.
ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. 4ನೇ ತರಗತಿಯ ವಿದ್ಯಾರ್ಥಿನಿ ಸೀತಾಪುರದ ಗೊಂಡ್ಲಾಮೌ ಬ್ಲಾಕ್‌ನಲ್ಲಿರುವ ತನ್ನ ಶಾಲೆಗೆ ತರಳಿದ್ದ ವೇಳಿಯಲ್ಲಿ ಈ ಘಟನೆ ನಡೆದಿದೆ. ಮುಖ್ಯಶಿಕ್ಷಕ ಅಪ್ರಾಪ್ತ ವಯಸ್ಸಿನ ಬಾಲಕಿ ಯನ್ನು ಶಾಲೆಯ ಆವರಣದಲ್ಲಿರುವ ಕೋಣೆಯಲ್ಲಿ ಕರೆಸಿಕೊಂಡು, ಆಕೆಗೆ ಅಸಭ್ಯ ವೀಡಿಯೊವನ್ನು ತೋರಿಸಿದ ದೌರ್ಜನ್ಯವೆಸಗಿದ್ದಾನೆ ಎಂದು ದೂರು ದಾಖಲಾಗಿದೆ.
ಹುಡುಗಿ ಅಳುತ್ತಾ ಪ್ರತಿರೋಧ ವ್ಯಕ್ತಪಡಿಸಿದಾಗ ಆತ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿದ. ಇದಾದ ನಂತರ, ಆತ ಬಲವಂತ ಮಾಡಿದನೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಪ್ರಾಪ್ತ ಬಾಲಕಿ ತನ್ನ ತಂದೆಯ ಮುಂದೆ ತನಗಾದ ಯಾತನೆಯ ಹೇಳಿದ್ದು, ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು, ಮುಖ್ಯೋಪಾಧ್ಯಾಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಸಂಬಂಧಿಸಿದ ಆರೋಪಗಳನ್ನು ಕೂಡ ಆತನ ವಿರುದ್ಧ ಹೂಡಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement