ಕೇರಳ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ನಟಿ ಬಂಧನ-ಬಿಡುಗಡೆ

ಕೊಟ್ಟಾಯಂ: ಪಾದರಕ್ಷೆಗಳನ್ನು ಧರಿಸಿ ಕೇರಳದ ಅರ್ನುಮುಲ ದೇವಾಲಯದ ಹಾವಿನ ದೋಣಿ ಹತ್ತಿ ಫೋಟೋ ಶೂಟ್ ಮಾಡಿದ ನಟಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಕಿರುತೆರೆಯ ನಟಿ ನಿಮಿಷಾ ಬೀಜೋ ಮತ್ತು ಆಕೆಯ ಛಾಯಾಗ್ರಾಹಕ ಉನ್ನಿ ಅವರನ್ನು ಶುಕ್ರವಾರ ತಿರುವಲ್ಲ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ ನಿಮಿಷಾ ತಮ್ಮ ಫೋಟೋ ಶೂಟ್‍ಗಾಗಿ ದೇವಸ್ಥಾನದ ಒಳಗೆ ಹೋಗಿದ್ದಲ್ಲದೆ ಪವಿತ್ರವೆಂದು ನಂಬಲಾದ ಹಾವಿನ ದೋಣಿ ಏರಿ ಪೋಟೋಗೆ ಪೋಸ್ ಕೊಟ್ಟಿದ್ದರು.
ಜೊತೆಗೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ಧಾರ್ಮಿಕ ಭಾವನಗೆ ಧಕ್ಕೆಯಾಗಿದೆ ಎಂದು ವ್ಯಾಪಕ ಆಕ್ರೋಶಗಳು ಕೇಳಿಬಂದಿದ್ದವು. ದೇವಸ್ಥಾನದ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ನಟಿ ಮತ್ತು ಛಾಯಾಗ್ರಾಹಕನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿವಾದ ತೀವ್ರಗೊಳ್ಳುತ್ತಿದ್ದಂತೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಫೋಟೋವನ್ನು ತೆಗೆದು ಹಾಕಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement