120 ನೂತನ ಉಚಿತ ಆಂಬುಲೆನ್ಸ್‌ ಲೋಕಾರ್ಪಣೆ ಮಾಡಿದ ಸಿಎಂ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣ, ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಆರೋಗ್ಯ ಸೇವೆಗಳನ್ನು ಒಂದೇ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಹೇಳಿದ್ದಾರೆ.
ವಿಧಾನ ಸೌಧದ ಪೂರ್ವದ್ವಾರದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಡೆದ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನ 120 ಆಂಬುಲೆನ್ಸ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದಾಯ ಆರೋಗ್ಯ ಕ್ಕೆ ಒತ್ತು ನೀಡಬೇಕು. ಸಾರ್ವಜನಿಕ ಆರೋಗ್ಯ ಡಿಪ್ಲೊಮಾ ಕೋರ್ಸ್ (ಡಿಪ್ಲೊಮಾ ಇನ್ ಪಬ್ಲಿಕ್ ಹೆಲ್ತ್) ಮಾಡಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸುವೆ ಎಂದರು.
ನಮ್ಮ ಕಡೆ 108 ಸಮಸ್ಯೆ ಇದೆ ಎಂದು ಮಾತನಾಡುತ್ತಾರೆ.108 ಸಮಸ್ಯೆಗೆ ಅಂಬುಲೆನ್ಸ್‌ ಪರಿಹಾರ. 108 ಅಷ್ಟು ಉಪಯುಕ್ತ, ಸಹಕಾರಿ ಆಗಿದೆ ಎಂದರು. ಆರೋಗ್ಯ ಸಚಿವರೂ ವೈದ್ಯರಾಗಿರುವುದುರಿಂದ, ಆರೋಗ್ಯ ಇಲಾಖೆಗೆ ಅಷ್ಟೇ ಅಲ್ಲ, ಆರೋಗ್ಯ ಕ್ಷೇತ್ರಕ್ಕೆ ಉಪಯುಕ್ತ ಆಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾPರ್ ಮಾತನಾಡಿ, ಮುಂದಿನ ದಿನಗಳಲ್ಲಿ ಅಂಬುಲೆನ್ಸ್‌ ಗಳಿಗೆ ಜಿಪಿಎಸ್ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
1 ಲಕ್ಷ ಜನಸಂಖ್ಯೆಗೆ 1 ಅಂಬುಲೆನ್ಸ್ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ 40 ರಿಂದ 50 ಜನರಿಗೆ 1 ಅಂಬುಲೆನ್ಸ್ ನೀಡಲಾಗುವುದು ಎಂದು ತಿಳಿಸಿದರು. 710 ಆಂಬುಲೆನ್ಸ್ ಈಗಾಗಲೇ ಸೇವಾ ನಿರತವಾಗಿದ್ದು, ಮತ್ತೆ 120 ಅಂಬುಲೆನ್ಸ್ ಗಳು ಸೇವೆಗೆ ಸಜ್ಜಾಗಿವೆ ಎಂದರು.
ರಾಜ್ಯದಲ್ಲಿ 3.8 ಲಕ್ಷ ಸರಾಸರಿಯಲ್ಲಿ ಪ್ರತಿ ನಿತ್ಯ ಲಸಿಕೆ ನೀಡಲಾಗುತ್ತದೆ. ರಾಷ್ಟ್ರದಲ್ಲಿ ಲಸಿಕೆ ನೀಡುವ ಸ್ಥಾನದಲ್ಲಿ 3-4ನೇ ಸ್ಥಾನದಲ್ಲಿ ರಾಜ್ಯ ಇದೆ ಎಂದು ಹೇಳಿದರು. ಸಚಿವರಾದ ಎಸ್‌.ಟಿ.ಸೋಮಶೇಖರ್, ಬಿ.ಎ.ಬಸವರಾಜ, ಬಿ.ಶ್ರೀರಾಮುಲು, ಮುನಿರತ್ನ, ಬಿ.ಡಿ.ಎ.ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement