ವಿಧಾನ ಸೌಧದ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ..!

ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವೆನಿಸಿಕೊಂಡಿರುವ ವಿಧಾನಸೌಧದೊಳಗೆ ಎಣ್ಣೆ ಪಾರ್ಟಿ ನಡೆಯುತ್ತಿತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಎರಡು ಬಿಯರ್‌ ಬಾಟಲಿಗಳು ವಿಧಾನಸೌಧದ ಒಳಗೆ ಪತ್ತೆಯಾಗಿರುವುದೇ ಈ ಅನುಮಾನ ಬರಲು ಕಾರಣವಾಗಿದೆ.
ವಿಧಾನಸೌಧದ 2ನೇ ಮಹಡಿಯಲ್ಲಿರುವ ರೂಂ ನಂಬರ್‌ 208ರ ಪಕ್ಕದ ನೀರಿನ ಟ್ಯಾಂಕ್‍ನ ಸಿಂಕ್ ಬಳಿ ಬಾಟಲ್ ಪತ್ತೆಯಾಗಿದ್ದು, ರಾತ್ರಿಯ ವೇಳೆಯಲ್ಲಿ ಪಾರ್ಟಿ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ವಿಧಾನಸೌಧದಲ್ಲಿ ಬಿಯರ್‌ ಬಾಟಲಿ ಪತ್ತೆಯಾಗಿರುವ ಕುರಿತು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೇ ಮಾಧ್ಯಮಗಳಲ್ಲಿ ಈ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆಯೇ ಅಧಿಕಾರಿಗಳು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಸ್ವಚ್ಚತಾ ಸಿಬ್ಬಂದಿ ಬಿಯರ್‌ ಬಾಟಲ್‌ಗಳನ್ನು ತೆರವುಗೊಳಿಸಿದ್ದಾರೆ. ಬಿಯರ್ ಬಾಟಲ್‌ ಫೋಟೋ ವೈರಲ್ ಆಗಿದೆ.
ವಿಧಾನಸಭಾ ಅಧಿವೇಶನ ಆರಂಭವಾದ ಮೊದಲ ದಿನವೇ ಬಿಯರ್ ಬಾಟಲ್ ಕಾಣಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವಿಧಾನ ಸೌಧದೊಳಗೆ ಮದ್ಯಪಾನ ಮಾಡಿದವರು ಯಾರು ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ. ಈ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement