ಕೋಲ್ಕತ್ತಾ: ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ಮನೆ ಮೇಲೆ ಎರಡನೇ ಸಲ ಬಾಂಬ್​ ದಾಳಿ..!

ಕೋಲ್ಕತ್ತಾ: ಕೋಲ್ಕತ್ತಾ ಸಮೀಪದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಮಂಗಳವಾರ ಮತ್ತೊಮ್ಮೆ ಬಾಂಬ್ ದಾಳಿ ನಡೆಸಲಾಗಿದೆ.
ಮೊದಲ ಘಟನೆ ನಡೆದು ಒಂದು ವಾರದ ನಂತರ ಮತ್ತೆ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ 8;30 ರ ಸುಮಾರಿಗೆ ಅವರ ಮನೆಯ ಹಿಂಭಾಗದಲ್ಲಿ ಕಚ್ಚಾ ಬಾಂಬ್‌ ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಅರ್ಜುನ್‌ ಸಿಂಗ್‌, “ಅಪರಾಧಿಗಳು ಮುಕ್ತವಾಗಿ ನಮ್ಮ ಮನೆಯ ಮೇಲೆ ಬಾಂಬ್​ ದಾಳಿ ಮಾಡಿ ತಿರುಗಾಡುತ್ತಿದ್ದಾರೆ, ಆದರೆ ಪೊಲೀಸರು ತೃಣಮೂಲ ಕಾಂಗ್ರೆಸ್​ ಪಕ್ಷದ ದಲ್ಲಾಳಿಗಳಾಗಿ ವರ್ತಿಸುತ್ತಿದ್ದಾರೆ. ಆದರೆ ಅಂತಹ ದಾಳಿಗಳಿಗೆ ನಾನು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಬಂಗಾಳದ ಉತ್ತರ 24 ಪರಗಣ (North 24 Parganas) ಜಿಲ್ಲೆಯ ಜಗತ್ತಾಲ್‌ನಲ್ಲಿರುವ ಅರ್ಜುನ್‌ ಸಿಂಗ್ ಅವರ ನಿವಾಸದ ಮೇಲೆ ಈ ಮೊದಲು ನಡೆದ ಬಾಂಬ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ ವಹಿಸಿಕೊಂಡಿದೆ. ಬಾಂಬ್​ ದಾಳಿಯ ವೇಳೆ ಯಾರಿಗೂ ಗಾಯವಾಗದಿದ್ದರೂ, ಸ್ಫೋಟದಿಂದಾಗಿ ಮನೆಯ ಕಬ್ಬಿಣದ ಗೇಟ್‌ಗಳಿಗೆ ಹಾನಿಯಾಗಿದೆ. ಘಟನೆ ನಡೆದಾಗ ಸಂಸದರು ಅವರ ಮನೆಯಲ್ಲಿ ಇರಲಿಲ್ಲ. ಆದರೆ ಅವರ ಕುಟುಂಬದ ಸದಸ್ಯರು ಒಳಗೆ ಇದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ