ಕುಮಟಾ: ಬೀಚಿನಲ್ಲಿ ಪದ್ಮಾಸನದಲ್ಲಿ ಕುಳಿತ ಶಿರಸಿ ವ್ಯಕ್ತಿ ಸಮುದ್ರ ಪಾಲು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳಿಯ ಅರಬ್ಬಿ ಸಮುದ್ರ ತೀರದಲ್ಲಿ ಶಿರಸಿಯ ವ್ಯಕ್ತಿಯೊಬ್ಬರು ಸಮುದ್ರ ಪಾಲಾಗಿದ್ದಾರೆ.
ಶಿರಸಿಯ ವಕೀಲ ವೃತ್ತಿಯ  ಸುಬ್ರಹ್ಮಣ್ಯ ಗೌಡ (39) ಎಂಬವರು ವನ್ನಳ್ಳಿಯ ಸಮುದ್ರ ತೀರದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಬಲವಾದ ತೆರೆಯೊಂದು ಬಡಿದು ಸಮುದ್ರ ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಪ್ರವಾಸಕ್ಕಾಗಿ ಕುಮಟಾದ ಬೀಚಿಗೆ ಬಂದಿದ್ದರು. ಇವರು ತಪಸ್ಸಿಗೆ ಕುಳಿತ ಭಂಗಿಯಲ್ಲಿ ಬಂಡೆಯ ಮೇಲೆ ಕುಳಿತಿದ್ದರು. ಆ ಸಂದರ್ಭದಲ್ಲಿ ಬಲವಾದ ತೆರೆ ಅವರಿಗೆ ಬಡಿದು ಅವಘಡ ನಡೆದಿದೆ. ಕುಮಟಾದಲ್ಲಿ ಅರಬ್ಬಿ ಸಮುದ್ರ ತೀರದಲ್ಲಿ ನೀರಿಗೆ ಇಳಿಯದಂತೆ ಕುಮಟಾ ತಹಶೀಲ್ದಾರ್ ವಿವೇಕ್ ಶೇನ್ವಿ ಈ ಹಿಂದೆಯೇ ಆದೇಶ ನೀಡಿದ್ದರು. ನಿಷೇಧಾಜ್ಞೆ ಇದ್ದರೂ ಅದನ್ನು ಮೀರಿ ಸಮುದ್ರ ತೀರಕ್ಕೆ ಪ್ರವಾಸಕ್ಕೆ ಬರುತ್ತಿದ್ದಾರೆ.ಇಂಥ ದುರ್ಘಟನೆಗಳು ಸಂಭವಿಸುತ್ತಿವೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement