ಊಹಾಪೋಹಗಳಿಗೆ ತೆರೆ: ಸಂಸದೆ-ನಟಿ ನುಸ್ರತ್ ಜಹಾನ್‌ ನವಜಾತ ಪುತ್ರನ ಜನ್ಮ ಪ್ರಮಾಣಪತ್ರದಲ್ಲಿ ತಂದೆ ಹೆಸರು ಯಶ್ ದಾಸ್‌ಗುಪ್ತಾ

 

ಬೆಂಗಾಲಿ ನಟಿ ಮತ್ತು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗನ ಜನನ ನೋಂದಣಿ ವಿವರಗಳು ಸಾರ್ವಜನಿಕ ವಲಯದಲ್ಲಿವೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಡಾಕ್ಯುಮೆಂಟ್ ಪ್ರಕಾರ, ಮಗುವಿಗೆ ಯಿಶಾನ್‌ ಜೆ.ದಾಸಗುಪ್ತಾ (Yishaan J Dasgupta) ಎಂದು ಹೆಸರಿಸಲಾಗಿದೆ. ಜನ್ಮ ಪ್ರಮಾಣಪತ್ರದಲ್ಲಿ ಮಗುವಿನ ತಂದೆ ಎಂದು ನಟ ಯಶ್ ದಾಸ್ ಗುಪ್ತಾ ಅವರ ಔಪಚಾರಿಕ ಹೆಸರಾದ ದೇಬಶಿಶ್ ದಾಸ್ ಗುಪ್ತಾ ಎಂದು  ಉಲ್ಲೇಖಿಸಲಾಗಿದೆ ಎಂದು ಇಂಡಿಯಾ ಟುಡೆ.ಕಾಮ್‌ ವರದಿ ಮಾಡಿದೆ. ಇಬ್ಬರು ನಟರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು.
ಸಂಸದೆ ನುಸ್ರತ್ ಜಹಾನ್ ಆಗಸ್ಟ್ 26 ರಂದು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು. ಅವರು ಗರ್ಭಿಣಿ ಎಂದು ಘೋಷಿಸಿದಾಗಿನಿಂದ, ಮಗುವಿನ ತಂದೆಯ ಸುತ್ತ ಸಾಕಷ್ಟು ಊಹಾಪೋಹಗಳಿದ್ದವು. ಈಗ, ಯಶ್ ದಾಸ್ ಗುಪ್ತಾ ತಂದೆ ಎಂದು ಜನನ ಪ್ರಮಾಣಪತ್ರದಲ್ಲಿ ದೃಢಪಟ್ಟಿದೆ. ಮಗುವಿಗೆ ಯಿಶಾನ್‌ ಜೆ.ದಾಸಗುಪ್ತಾ (Yishaan J Dasgupta) ಎಂದು ಹೆಸರಿಡಲಾಗಿದೆ.
ನುಸ್ರತ್ ಜಹಾನ್‌ ಅವರು 2019 ರಲ್ಲಿ ಟರ್ಕಿಯಲ್ಲಿ ನಡೆದ ವಿವಾಹದಲ್ಲಿ ಉದ್ಯಮಿ ನಿಖಿಲ್ ಜೈನ್ ಜೊತೆ ವಿವಾಹವಾಗಿದ್ದರು. ಆದರೆ ದಂಪತಿ ನಡುವೆ ಕಹಿ ಉಂಟಾಯಿತು ಮತ್ತು ಅವರು ಶೀಘ್ರದಲ್ಲೇ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದರು. ಅವರ ಪ್ರತ್ಯೇಕತೆಯ ನಂತರ, ನುಸ್ರತ್ ಅನೇಕ ಸಂದರ್ಭಗಳಲ್ಲಿ ಯಶ್ ಜೊತೆ ಕಾಣಿಸಿಕೊಂಡಿದ್ದರು.
ಈಗ ಬೇರೆಯಾಗಿರುವ ಪತಿ ನಿಖಿಲ್ ಜೈನ್ ಅವರೊಂದಿಗಿನ ವಿವಾಹವು ಭಾರತದಲ್ಲಿ ಕಾನೂನುಬದ್ಧವಾಗಿಲ್ಲ ಎಂದು ನಟಿ ಕೂಡ ಮೊದಲೇ ಉಲ್ಲೇಖಿಸಿದ್ದರು. ನವೆಂಬರ್ 2020 ರಿಂದ ನುಸ್ರತ್ ಮತ್ತು ನಿಖಿಲ್ ಬೇರೆಯಾಗಿದ್ದಾರೆ.
ನುಸ್ರತ್ ಜಹಾನ್ ಆಗಸ್ಟ್ 25 ರಂದು ಕೋಲ್ಕತ್ತಾದ ನಿಯೋಟಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಯಶ್ ದಾಸ್ ಗುಪ್ತಾ ನುಸ್ರತ್ ಆಸ್ಪತ್ರೆಗೆ ಕರೆದೊಯ್ದರು. ನುಸ್ರತ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಅವರು ದೃಪಡಿಸಿದರು. “ನುಸ್ರತ್ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವವರಿಗೆ, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದರು.
ಬಂಗಾಲಿ ನಟಿ ನುಸ್ರತ್ ಜಹಾನ್ 2019 ರಲ್ಲಿ ರಾಜಕೀಯಕ್ಕೆ ಸೇರಿದರು ಮತ್ತು ಲೋಕಸಭೆ ಚುನಾವಣೆಯಲ್ಲಿ ಬಸಿರ್ಹತ್ ನಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement