ಕುಮಟಾ: ಬೋನಿನಲ್ಲಿದ್ದ ನಾಯಿ ಹಿಡಿಯಲು ಹೋಗಿ ತಾನೇ ಬಂಧಿಯಾದ ಚಿರತೆ..!

ಕುಮಟಾ; ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿದ್ದ ನಾಯಿ ಹಿಡಿಯಲು ಹೋಗಿ ತಾನೇ ಬೋನಿನಲ್ಲಿ ಬಂಧಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ.
ಹೊಂಚು ಹಾಕಿ ರಾತ್ರಿ ಸಮಯದಲ್ಲಿ ನಾಯಿ ಹಿಡಿಯಲು ಬಂದಿದ್ದ ಚಿರತೆ ನಾಯಿ ಬೋನಿನೊಳಗೆ ಹೋದದ್ದನ್ನ ಗಮನಿಸಿದ ಮನೆಯ ಮಾಲಿಕರು ತಕ್ಷಣ ಬೋನ್‌ ಬಾಗಿ ಹಾಕಿದ್ದಾರೆ.

ಬೋನಿನಲ್ಲಿದ್ದ ನಾಯಿ ತಪ್ಪಿಸಿಕೊಂಡಿದೆ. ಆದರೆ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಚಿರತೆ ರಕ್ಷಣೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ನಾಯಿ ಬೋನು ಹೆಚ್ಚು ಗಟ್ಟಿಮುಟ್ಟಾಗಿಲ್ಲ ಕಾರಣ ಚಿರತೆ ಹೊರಬಂದು ದಾಳಿ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆಯಿಂದ ಅದನ್ನು ಕಾಡಿಗೆ ಒಯ್ಯುವ ಕಾರ್ಯ ಮಡಲಾಗುತ್ತಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement