ನವದೆಹಲಿ: ಮುಂಬರುವ ಎರಡು ಮೂರು ತಿಂಗಳುಗಳು ನಿರ್ಣಾಯಕವಾಗಿದ್ದು, ದೇಶದಲ್ಲಿ ಯಾವುದೇ ರೀತಿಯಲ್ಲಿ ಕೊವಿಡ್ (Covid) ಉಲ್ಬಣಕ್ಕೆ ಅವಕಾಶ ಕೊಡಬೇಡಿ ಎಂದುನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪಾಲ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮತ್ತು ನವೆಂಬರ್ ಅತ್ಯಂತ ನಿರ್ಣಾಯಕ ತಿಂಗಳುಗಳಾಗಿವೆ. ಇವು ಹಬ್ಬಗಳು ಮತ್ತು ಜ್ವರದ ತಿಂಗಳುಗಳು. ಈ ಎರಡು ತಿಂಗಳ ಬಗ್ಗೆ ನಾವು ವಿಶೇಷ ಎಚ್ಚರಿಕೆ ವಹಿಸಬೇಕು. ಹಬ್ಬಗಳನ್ನು ಸರಳವಾಗಿ ಆಚರಿಸಬೇಕು ಎಂದು ಅವರು ಹೇಳಿದ್ದಾರೆ.
ಹಿಂದಿನ 11 ವಾರಗಳ ಸಾಪ್ತಾಹಿಕ ಧನಾತ್ಮಕ ದರವು ಶೇ 3ಕ್ಕಿಂತ ಕಡಿಮೆಯಿರುವುದರಿಂದ ದೇಶದಲ್ಲಿ ಕೊವಿಡ್ ಪರಿಸ್ಥಿತಿ ಸ್ಥಿರವಾಗಿದೆ. ಈಗ ಕೇರಳದ ಪರಿಸ್ಥಿತಿಯೂ ಸುಧಾರಿಸುತ್ತಿದೆ. ಆದರೂ ಕೇರಳದಲ್ಲಿ ದೇಶದ ದಿನನಿತ್ಯ ಪ್ರಕರಣದ ಶೇ 68 ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳದಲ್ಲಿ ಕೆಲವು ಸೋಂಕುಗಳು ಕಡಿಮೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇತರ ರಾಜ್ಯಗಳು ಭವಿಷ್ಯದ ಉಲ್ಬಣವನ್ನು ತಪ್ಪಿಸುವ ಹಾದಿಯಲ್ಲಿವೆ. ಆದಾಗ್ಯೂ, ಹಬ್ಬಗಳು ಸಮೀಪಿಸುತ್ತಿವೆ ಮತ್ತು ಜನಸಂಖ್ಯಾ ಸಾಂದ್ರತೆಯ ಹಠಾತ್ ಹೆಚ್ಚಳವು ವೈರಸ್ ಹರಡುವಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, . ಕೇರಳದಲ್ಲಿ 1.99 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇತರ 5 ರಾಜ್ಯಗಳಾದ ಮಿಜೋರಾಂ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ – 10,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ ಎಂದು ಹೇಳಿದರು.
ಕಳೆದ 11 ವಾರಗಳ ಸಾಪ್ತಾಹಿಕ ಧನಾತ್ಮಕ ದರವು ಶೇ 3ಕ್ಕಿಂತ ಕಡಿಮೆಯಿದೆ. 64 ಜಿಲ್ಲೆಗಳು ಇನ್ನೂ ಶೇ 5 ಕೊವಿಡ್ ಸಕಾರಾತ್ಮಕತೆಯನ್ನು ವರದಿ ಮಾಡುತ್ತಿವೆ. ಕಾಳಜಿಯಿರುವ ಜಿಲ್ಲೆಗಳಲ್ಲಿ ಕೊವಿಡ್ ಸೂಕ್ತ ನಡವಳಿಕೆ, ಲಸಿಕೆ, ಈ ಪ್ರದೇಶಗಳಲ್ಲಿ ಕಣ್ಗಾವಲುಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು.
ವೈಜ್ಞಾನಿಕ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಯ ಚರ್ಚೆಯಲ್ಲಿ ಈ ಸಮಯದಲ್ಲಿ ಬೂಸ್ಟರ್ ಡೋಸ್‌ಗಳು ಪ್ರಧಾನ ವಿಷಯವಲ್ಲ ಎಂದು ಹೇಳಿದ ಭಾರ್ಗವ. “ಎರಡು ಡೋಸ್‌ಗಳ ಸಂಪೂರ್ಣ ಲಸಿಕೆಯನ್ನು ಪಡೆಯುವುದು ಪ್ರಮುಖ ಆದ್ಯತೆಯಾಗಿ ಉಳಿದಿದೆ. ಪ್ರತಿಕಾಯಗಳ ಮಟ್ಟವನ್ನು ಅಳೆಯಬಾರದು ಎಂದು ಹಲವಾರು ಏಜೆನ್ಸಿಗಳು ಶಿಫಾರಸು ಮಾಡಿವೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ