ಬೆಂಗಳೂರು; ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಗುಂಡು ಹಾರಿಸಿಕೊಂಡು ಮೃತಪಟ್ಟ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನ ಶವ ನಗರದಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ನಗರದ ಸಂಜಯನಗರ ಮುಖ್ಯ ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ರಾಹುಲ್ ಭಂಡಾರಿ (17) ಎಂದು ಗುರುತಿಸಲಾಗಿದೆ. ರಾಹುಲ್ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗಿದೆ. ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಹುಲ್ ಮೃತಪಟ್ಟಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪಿಸ್ತೂಲ್ 3.2ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದು, ರಾಹುಲ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರಾಹುಲ್‌ ಭಂಡಾರಿ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಬೇರೆ ಯಾರಾದರೂ ರಾಹುಲ್ ತಲೆಗೆ ಗುಂಡು ಹಾರಿಸಿದ್ದಾರಾ ಎಂಬ ಅನುಮಾನದ ಮೇಲೆಯೂ ಸದಾಶಿವನಗರ ಠಾಣೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ರಾತ್ರಿ ಊಟ ಮಾಡಿ ಮಲಗಿದ್ದ ರಾಹುಲ್‌ ಭಂಡಾರಿ ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ ಮನೆಯಿಂದ ಹೊರ ಬಂದಿದ್ದಾನೆ. ಪ್ರತಿದಿನ 3-4 ಗಂಟೆಗೆ ಎದ್ದು ಆತ ಓದಿಕೊಳ್ಳುತ್ತಿದ್ದ. ಕೆಲವು ದಿನ ವಾಕ್ ಸಹ ಹೋಗುತ್ತಿದ್ದ ಎನ್ನಲಾಗಿದ್ದು, ಇಂದು (ಶುಕ್ರವಾರ) ಮುಂಜಾನೆ ಎದ್ದ ಪೋಷಕರು ರೂಂನಲ್ಲಿ ರಾಹುಲ್ ಕಾಣದಿದ್ದಾಗ ಕರೆ ಮಾಡಿದ್ದಾರೆ. ಆದರೆ ಪೋನ್ ಕರೆ ಸ್ವೀಕಾರ ಮಾಡಿಲ್ಲ.
ರಾಹುಲ್‌ ಭಂಡಾರಿ ತಲೆಯ ಎಡಭಾಗಕ್ಕೆ ಗುಂಡು ಹೊಕ್ಕಿದೆ. ರಾಹುಲ್‌ ಶವ ನೋಡಿದ ಪೊಲೀಸರು ಪೋಷಕರಿಂದ ಮೊಬೈಲ್‌ಗೆ ಬರುತ್ತಿದ್ದ ಕರೆ ಗಮನಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಹುಲ್ ಭಂಡಾರಿ ತಂದೆ ಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಎಂಬ ಮಾಹಿತಿಯಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement