ಮುಂಬೈ: ಫ್ಲೈ ಓವರ್‌ ಕುಸಿತ, 14 ಮಂದಿ ಗಂಭೀರ ಗಾಯ

ಮುಂಬೈ: ಫ್ಲೈ ಓವರ್‌ ಕುಸಿತ: 14 ಮಂದಿ ಗಂಭೀರ ಗಾಯ
ಮುಂಬೈ : ಮುಂಬೈನಲ್ಲಿ ಇಂದು (ಶುಕ್ರವಾರ) ಬೆಳ್ಳಂಬೆಳಗ್ಗೆ ನಿರ್ಮಾಣ ಹಂತದ ಫ್ಲೈ ಓವರ್ ಕುಸಿದು ಬಿದ್ದಿದ್ದ್ದು, 14 ಕಾರ್ಮಿಕರು ಗಾಯಗೊಂಡಿದ್ದಾರೆ.
ಮುಂಜಾನೆ 4:30ರರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬಳಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಇದಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಹಲವಾರು ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಹೀಗಾಗಿ ಫ್ಲೈ ಓವರ್ ಕುಸಿದ ಪರಿಣಾಮ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ ಮತ್ತು ಯಾವುದೇ ವ್ಯಕ್ತಿ ಕಾಣೆಯಾಗಿಲ್ಲ “ಎಂದು ಡಿಸಿಪಿ (ವಲಯ 8) ಮಂಜುನಾಥ್ ಸಿಂಗೆ ತಿಳಿಸಿದ್ದಾರೆ.
ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.ಮಾಡಲಾಗುತ್ತಿದೆ. ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement