ಆಧಾರ್​- ಪ್ಯಾನ್ ಜೋಡಣೆ ಗಡುವು ಮತ್ತೊಮ್ಮೆ ವಿಸ್ತರಣೆ

ನವದೆಹಲಿ: ಪ್ಯಾನ್-ಆಧಾರ್ ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಣೆ ಮಾಡಿದೆ.
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವ ಗಡುವನ್ನು ಈಗಿದ್ದ ಸೆಪ್ಟೆಂಬರ್ 30ರಿಂದ ಆರು ತಿಂಗಳು, ಅಂದರೆ 2022ರ ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿಕೆಯಲ್ಲಿ ತಿಳಿಸಿರುವಂತೆ, ಕೊವಿಡ್ -19 ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಂಕಷ್ಟವನ್ನು ಪರಿಹರಿಸಲು ನಿಯಮಾವಳಿಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಕಾಲಾವಧಿಯನ್ನು ವಿಸ್ತರಿಸಲಾಗಿದೆ.
“ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲು ಆದಾಯ ತೆರಿಗೆ ಇಲಾಖೆಗೆ ಆಧಾರ್ ಸಂಖ್ಯೆಯನ್ನು ತಿಳಿಸುವ ಸಮಯದ ಮಿತಿಯನ್ನು 30ನೇ ಸೆಪ್ಟೆಂಬರ್, 2021ರಿಂದ 31ನೇ ಮಾರ್ಚ್, 2022ಕ್ಕೆ ವಿಸ್ತರಿಸಲಾಗಿದೆ,” ಎಂದು ಅದು ಹೇಳಿದೆ. ಅಲ್ಲದೆ, ಆದಾಯ-ತೆರಿಗೆ ಕಾಯ್ದೆಯಡಿ ದಂಡ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30, 2021 ರಿಂದ ಮಾರ್ಚ್ 31, 2022ರ ವರೆಗೆ ವಿಸ್ತರಿಸಲಾಗಿದೆ.
ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ 1988ರ ಅಡಿಯಲ್ಲಿ ತೀರ್ಪು ನೀಡುವ ಪ್ರಾಧಿಕಾರದಿಂದ ಸೂಚನೆ ನೀಡುವ ಮತ್ತು ಆದೇಶವನ್ನು ಜಾರಿಗೊಳಿಸುವ ಕಾಲಮಿತಿಯನ್ನು ಮಾರ್ಚ್ 2022ಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   ಪೌರತ್ವ (ತಿದ್ದುಪಡಿ) ಕಾಯ್ದೆ ಅಡಿ ಮೊದಲ ಬಾರಿಗೆ 14 ಜನರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಕೇಂದ್ರ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement