4 ಪುಟ್ಟ ಮಕ್ಕಳಿಗೆ ವಿಷವುಣಿಸಿ ನೀರಿನ ಟ್ಯಾಂಕಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ..!

ಬಾರ್ಮರ್,: 30 ವರ್ಷದ ವ್ಯಕ್ತಿಯೋರ್ವ ತನ್ನ ನಾಲ್ವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಎಸೆದು ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ತಾನದಲ್ಲಿ ವರದಿಯಾಗಿದೆ.
ಪೋಶಾಲಾ ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪುರ್ಖಾ ರಾಮ್ ತನ್ನ ಪುತ್ರಿಯರಾದ ಜಿಯೊ (9), ನೊಜಿ (ಏಳು), ಹೀನಾ (ಮೂರು) ಮತ್ತು ಒಂದೂವರೆ ವರ್ಷದ ಲಾಸಿಗೆ ವಿಷ ಉಣಿಸಿ ನೀರಿನ ತೊಟ್ಟಿಗೆ ಎಸೆದಿದ್ದಾನೆ.
ಆತನು ಅವರನ್ನು ತನ್ನ ಮನೆಯ ಹೊರಗೆ 13 ಅಡಿ ಆಳದ ನೀರಿನ ತೊಟ್ಟಿಯಲ್ಲಿ ಎಸೆದ ಮತ್ತು ನಂತರ ತಾನೂ ಅದರೊಳಗೆ ಧುಮುಕಿದ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಓಂಪ್ರಕಾಶ್ ಹೇಳಿದ್ದಾರೆ.
ನೆರೆಹೊರೆಯವರು ಆತ ತೊಟ್ಟಿಗೆ ಜಿಗಿಯುವುದನ್ನು ಗಮನಿಸಿದರು ಮತ್ತು ಅವರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅಧಿಕಾರಿ ಹೇಳಿದರು.
“ಎಲ್ಲಾ ನಾಲ್ಕು ಹುಡುಗಿಯರು ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಹತ್ತಿರದ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು ಮತ್ತು ಪುರ್ಖಾ ರಾಮ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ, ”ಎಂದು ಅವರು ಹೇಳಿದರು.
ಐದು ತಿಂಗಳ ಹಿಂದೆ ಕೋವಿಡ್‌ನಿಂದ ಅವರ ಪತ್ನಿ ಮೃತಪಟ್ಟಿದ್ದರಿಂದ ನೊಂದಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ತನ್ನ ಹೆಣ್ಣುಮಕ್ಕಳಿಗೆ ತಾಯಿಯಾಗಬಹುದು ಎಭ ಕಾರಣಕ್ಕೆ ತನ್ನ ಹೆಂಡತಿಯ ತಂಗಿಯನ್ನು ಮದುವೆಯಾಗಲು ಬಯಸಿದ್ದರಿಂದ ಆದರೆ ಆಕೆ ಒಪ್ಪಲಿಲ್ಲ ಎಂದು ಅವರು ಹೇಳಿದರು

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement