ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಮಣ್ಣಿನ ತೇವಾಂಶ ಸಾಮರ್ಥ್ಯ ಅಳೆಯುವ ಸಾಧನ ಅಭಿವೃದ್ಧಿ: ಕರ್ನಾಟಕ ವಿಜ್ಞಾನ -ತಂತ್ರವಿದ್ಯಾ ಮಂಡಳಿಯಿಂದ ’ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ

ಕುಮಟಾ: ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ನವೀನ್ ಹೆಗಡೆ, ಪ್ರೊ. ಸುನಿಲ್ ಹಲ್ದನಕರ್  ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಡಾ. ಸಚಿನ್ ಭಟ್ಟ ಅವರ ಮಾರ್ಗದರ್ಶನದಲ್ಲಿ  ಮಣ್ಣಿನ ತೇವಾಂಶ  ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ  (Artificial Intelligence ) ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ’ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ’ ಲಭ್ಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಡಾ. ಸಚಿನ್ ಭಟ್ಟ ಹಾಗೂ ಕಾರವಾರದ ಪ್ರೊ. ಸುನಿಲ್ ಹಲ್ದನಕರ್ ಹಾಗೂ ಕುಮಟಾದವರಾದ ಅವರ ಮಾರ್ಗದರ್ಶನದಲ್ಲಿ ಕುಮಟಾದ ಹೆಗಡೆಯವರಾದ ನವೀನ್ ಹೆಗಡೆ ಅವರು ತಯಾರಿಸಿದ ಈ ಸಾಧನಕ್ಕೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಸಂಶೋಧನಾ ಪುರಸ್ಕಾರದ ಗರಿ ಪ್ರಾಪ್ತವಾಗಿದೆ.
ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಣ್ಣಿನ ಗುಣಲಕ್ಷಣಗಳನ್ನು ಸ್ಥಳದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಕಂಡುಹಿಡಿಯುವ ಈ ಯಂತ್ರದಿಂದ ಲ್ಯಾಬ್  (lab) ಪರೀಕ್ಷೆಯ ಸಮಯವನ್ನು ಉಳಿಸಬಹುದಾಗಿದೆ. ಮಾತ್ರವಲ್ಲದೆ, ಈಗ ಬಳಕೆಯಲ್ಲಿರುವ ಸಾಧನದ ಸುತ್ತಿಗೆಯು 65 ಕೆಜಿ ತೂಕದ್ದಾಗಿದ್ದು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಣೆ ಕಷ್ಟಕರವಾಗಿರುತ್ತದೆ. ಅಧುನಿಕ ಸೆನ್ಸರುಗಳನ್ನು ಬಳಸಿ ತಯಾರಿಸಲಾದ ಈ ಸಾಧನವು ಕೇವಲ 20 ಕೆಜಿ ತೂಕವನ್ನು ಹೊಂದಿದ್ದು ಸಾಗಣೆಗೆ ತಗಲುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ. ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ಟ ಹಾಗೂ ಆಡಳಿತ ಮಂಡಳಿಯವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement