ಕೋಲ್ಕತ್ತಾ: ರಾಜಕೀಯ ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ಒಂದು ತಿಂಗಳ ನಂತರ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ, ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿದ್ದ ಬಾಬುಲ್ ಸುಪ್ರಿಯೋ ಅವರನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒಬ್ರೈನ್ ಅವರು ಟಿಎಂಸಿಗೆ ಔಪಚಾರಿಕವಾಗಿ ಸೇರಿಸಿಕೊಂಡರು.
ಇಂದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರ ಸಮ್ಮುಖದಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕುಟುಂಬಕ್ಕೆ ಸೇರ್ಪಡೆಯಾದರು” ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಇಂದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಆರ್‌ಎಸ್ ಎಂಪಿ ಡೆರೆಕ್ ಒ’ಬ್ರೇನ್ ಅವರ ಸಮ್ಮುಖದಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕುಟುಂಬಕ್ಕೆ ಸೇರಿಕೊಂಡರು” ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಈ ಹಿಂದೆ ರಾಜಕೀಯ ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ಸಂಸದ ಬಾಬುಲ್ ಸುಪ್ರಿಯೋ ಕಳೆದ ತಿಂಗಳು ಆಗಸ್ಟ್ 1 ರಂದು ರಾಜಕೀಯ ನಿರ್ಗಮನ ಘೋಷಣೆ ಮಾಡಿದ್ದರು. ಹಾಗೆಯೇ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.
ಈ ನಿರ್ಧಾರವು ಭಾಗಶಃ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳು ಕಾರಣ ಎಂಬ ಸುಳಿವನ್ನು ಸ್ವತಃ ಬಾಬುಲ್ ಸುಪ್ರಿಯೋ ನೀಡಿದ್ದರು. ಈ ಸಂದರ್ಭದಲ್ಲೇ ಬಾಬುಲ್ ಸುಪ್ರಿಯೋ ಟಿಎಂಸಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಬಾಬುಲ್ ಸುಪ್ರಿಯೋ ಮಾತ್ರ ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಭರ್ಜರಿ ಜಯಗಳಿಸಿ ಆಡಳಿತವನ್ನು ಮತ್ತೆ ವಹಿಸಿಕೊಂಡ ನಂತರ ನಾಲ್ವರು ಬಿಜೆಪಿ ಶಾಸಕರುಗಳು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈಗ ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರೀಯೋ ಕೂಡಾ ಟಿಎಂಸಿಗೆ ಸೇರ್ಪಡೆಯಾಗಿರುವುದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಉಂಟು ಮಾಡಿದೆ.
2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋರನ್ನು ಕಳೆದ ತಿಂಗಳ ಆರಂಭದಲ್ಲಿ ಪ್ರಮುಖ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಕೈಬಿಡಲಾಗಿತ್ತು. ಈ ವಿಚಾರದಲ್ಲಿಯೇ ಅಸಮಾಧಾನ ಉಂಟಾಗಿದೆ ಎಂದು ಕೂಡಾ ಹೇಳಲಾಗುತ್ತಿದೆ. ಇನ್ನು ಈ ಹಿಂದೆ ತಾನು ಟಿಎಂಸಿ ಸೇರ್ಪಡೆಯಾಗುವ ಬಗ್ಗೆ ಆಗಿದ್ದ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಾಬುಲ್ ಸುಪ್ರಿಯೋ, “ನಾನು ರಾಜಕೀಯ ತೊರೆಯುತ್ತಿದ್ದೇನೆ, ಅಲ್ವಿದಾ. ನನ್ನ ಪೋಷಕರು, ಪತ್ನಿ, ಸ್ನೇಹಿತ ಜೊತೆಯಲ್ಲಿ ಮಾತುಕತೆ ನಡೆಸಿದೆ. ಅವರೆಲ್ಲರ ಸಲಹೆಯನ್ನು ಕೇಳಿದ ನಂತರ ನಾನು ನಿರ್ಗಮನದ ಘೋಷಣೆ ಮಾಡುತ್ತಿದ್ದೇನೆ. ಆದರೆ ನಾನು ಯಾವುದೇ ಬೇರೆ ಪಕ್ಷಕ್ಕೆ ಹೋಗುತ್ತಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವ ಪಕ್ಷಕ್ಕೂ ಸೇರ್ಪಡೆ ಆಗುತ್ತಿಲ್ಲ ಎಂದು ಈ ಮೂಲಕ ನಾನು ದೃಢಪಡಿಸುತ್ತೇನೆ,” ಎಂದು ತಿಳಿಸಿದ್ದರು.
ಬಾಬುಲ್ ಸುಪ್ರಿಯೋ ಭದ್ರತೆಯನ್ನು ಕಡಿಮೆ ಮಾಡಲಾಗಿದೆ ಮೂಲಗಳ ಪ್ರಕಾರ, ಬಾಬುಲ್ ಸುಪ್ರಿಯೋ ಅವರ ಭದ್ರತೆಯನ್ನು, ಕೇಂದ್ರವು ಒದಗಿಸಿದ್ದು, Z ನಿಂದ Y ವರ್ಗಕ್ಕೆ ಇಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ