ಕಣ್ವಮಠದ ಶ್ರೀಗಳ ಚಾತುರ್ಮಾಸ್ಯ ಸಂಪನ್ನ:ವೀರಘಟ್ಟದಲ್ಲಿ ಭಕ್ತರೊಂದಿಗೆ ಕೃಷ್ಣಾ ನದಿಯಲ್ಲಿ ದಂಡೋದಕ

ಯಾದಗಿರಿ : ಜಿಲ್ಲೆಯ ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರಿಂದ ಕೃಷ್ಣಾ ನದಿ ತಟ ವೀರಘಟ್ಟದಲ್ಲಿ ಭಕ್ತರೊಂದಿಗೆ ದಂಡೋದಕ ಸ್ನಾನ ಮಾಡುವ ಮೂಲಕ ಚಾತುರ್ಮಾಸ್ಯ ಸಂಪನ್ನವಾಯಿತು.
ಇಂದು(ಸೋಮವಾರ) ಬೆಳಿಗ್ಗೆ ದ್ವಿತೀಯ ಚಾತುರ್ಮಾಸ್ಯ ಸ್ಥಳವಾದ ಶ್ರೀ ಕ್ಷೇತ್ರ ಬುದ್ಧಿನ್ನಿಯಿಂದ ಹೊರಟು ಶ್ರೀಮನ್ ಮಾಧವತೀರ್ಥರ ತಪೋಭೂಮಿಯಾದ ವೀರ ಘಟ್ಟದಲ್ಲಿ ಉತ್ಥಾನ ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಭಕ್ತರೊಂದಿಗೆ ದಂಡೋದಕ ಸ್ನಾನ ಮಾಡಿ ಆಶೀರ್ವಚನ ನೀಡಿದರು.
ಸನ್ಯಾಶ್ರಮ ಸಿಗುವುದೇ ಒಂದು ಭಾಗ್ಯ. ಏಕೆಂದರೆ ಅವರು ತಮ್ಮ ವ್ಯಯಕ್ತಿಕ ಜೀವನದ ಬಗ್ಗೆ ಚಿಂತನೆ ಮಾಡದೆ ಸಕಲ ಜೀವ ರಾಶಿಗಳ ಲೇಸನ್ನೇ ಬಯಸುತ್ತಾರೆ. ಸನ್ಯಾಸಿ ಅಧ್ಯಾತ್ಮ ಸಾಧನೆ ಮಾಡುವ ಮೂಲಕ ದೇವರ ಹತ್ತಿರ ಭಕ್ತರನ್ನು ಕರೆದುಕೊಂಡು ಹೋಗಬೆಕು. ಸಮಾಜದ ಏಳ್ಗೆಯನ್ನೇ ಬಯಸಬೇಕು ಎಂದು ಹೇಳಿದರು.
ಸನಾತನ ಕಾಲದಿಂದ ಋಷಿ ಪರಂಪರೆ ನಮ್ಮ ದೇಶದಲ್ಲಿ ಇಂದಿಗೂ ಮುಂದುವರಿಯುತ್ತಾ ಬಂದಿದ್ದು, ವೇದಗಳನ್ನು ಮತ್ತು ಉಪನಿಷತ್ತುಗಳನ್ನು ಉಳಸಿಕೊಂಡು ಹೋಗುತ್ತಿದ್ದಾರೆ ಎಂದರು.
ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಮಹಾಮಾರಿ ಕೊರೋನಾ ಹರಡಿರುವುದರಿಂದ ಸರಳವಾಗಿ ಚಾತುರ್ಮಾಸ್ಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದಕ್ಕೆ ಭಕ್ತರು ಸಹ ಸಹಕಾರ ನೀಡಿದ್ದಾರೆ. ಎಲ್ಲರೂ ರೋಗ ನಿವರಣೆಗೆ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೆಳಿದರು.
ಈ ಸಂದರ್ಭದಲ್ಲಿ ಅರ್ಚಕರಾದ ರಾಜೇಂದ್ರಾಚಾರ್, ಸುರೇಶ್ ಕುಲ್ಕರ್ಣಿ, ಭೀಮಸೇನಾಚಾರ್ಯ ಜೋಶಿ, ಭೀಮಸೇನರಾವ್ ಬನ್ನಟ್ಟಿ, ರಾಮಣ್ಣ ಸೂಗೂರ್, ವಿನುತ ಎಸ್. ಜೋಶಿ ಮತ್ತು ಶಿಷ್ಯವೃಂದದವರು ಉಪಸ್ಥಿತರಿದ್ದರು

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement