ನನ್ನ ಮೇಲೆ ರಾಡ್‌ನಿಂದ ಹಲ್ಲೆ, ಆಸಿಡ್ ದಾಳಿಗೆ ಯತ್ನ: ನಟಿ ಪಾಯಲ್‌ ಘೋಷ ಹೇಳಿಕೆ

ಮುಂಬೈ: ನಟಿ ಮತ್ತು ರಾಜಕಾರಣಿ ಪಾಯಲ್ ಘೋಷ್ ಇತ್ತೀಚೆಗೆ ಮುಂಬೈನಲ್ಲಿ ಔಷಧಿಗಳನ್ನು ಖರೀದಿಸಿ ಮನೆಗೆ ಮರಳುತ್ತಿದ್ದಾಗ ಕೆಲವು ಮಾಸ್ಕ್‌ ಧರಿಸಿದ ವ್ಯಕ್ತಿಗಳಿಂದ ಹಲ್ಲೆಗೊಳಗಾದರು. ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ಕೆಲವು ಪುರುಷರು ತನ್ನ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದರು ಎಂದು ಅವರು ಬಹಿರಂಗಪಡಿಸಿದ್ದಾರೆ.
ಅವರ ಕೈಯಲ್ಲಿ ಒಂದು ಬಾಟಲಿಯೂ ಇತ್ತು ಎಂದು ಹೇಳಿರುವ ಅವರು ಅದನ್ನು ಆಸಿಡ್ ಎಂದು ಶಂಕಿಸಿದ್ದಾರೆ. ಅವರು ದಾಳಿಕೋರರಿಂದ ತಪ್ಪಿಸಿಕೊಂಡರು ಆದರೆ ಅವರ ಎಡಗೈಗೆ ಗಾಯವಾಗಿದೆ.
2020ರಲ್ಲಿ ರಾಮದಾಸ್ ಅಠವಾಲೆ ಅವರ ಪಕ್ಷಕ್ಕೆ ಸೇರಿದ ಪಾಯಲ್ ಘೋಷ್ ಈ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪಾಯಲ್ ಘೋಷ್ ಅವರ ಅಭಿಮಾನಿ ಪುಟವೊಂದರಿಂದ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ನಟಿ ಇತ್ತೀಚೆಗೆ ಮುಂಬೈನಲ್ಲಿ ಕೆಲವು ಮಾಸ್ಕ್‌ ಧರಿಸಿದ ವ್ಯಕ್ತಿಗಳಿಂದ ತನ್ನ ಮೇಲೆ ಹೇಗೆ ದಾಳಿ ಮಾಡಲಾಯಿತು ಎಂಬುದರ ಕುರಿತು ಮಾತನಾಡಿದ್ದಾರೆ. ದಾಳಿಕೋರರು ತಮ್ಮೊಂದಿಗೆ ಒಂದು ಬಾಟಲಿಯನ್ನು ಒಯ್ದಿದ್ದರಿಂದ ಇದು ಆಸಿಡ್ ದಾಳಿಯ ಪ್ರಯತ್ನವಾಗಿರಬಹುದು ಎಂದು ಅವರು ಶಂಕಿಸಿದ್ದಾರೆ. ಕೈಗೆ ಗಾಯವಾಗಿರುವ ನಟಿ ಈ ವಿಷಯದ ಮೇಲೆ ಎಫ್ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ.
ಅವರು ನನಗೆ ರಾಡ್ ನಿಂದ ಹೊಡೆಯಲು ಸಹ ಪ್ರಯತ್ನಿಸಿದರು. ನಾನು ರಕ್ಷಿಸಲು (ತಪ್ಪಿಸಿಕೊಳ್ಳಲು) ಪ್ರಯತ್ನಿಸಿದೆ ಮತ್ತು ಕೂಗಿದೆ, ರಾಡ್ ನನ್ನ ಎಡಗೈಗೆ ಬಡಿದು ಗಾಯವಾಯಿತು. ಬಹುಶಃ ಇಂದು ನಾನು ಎಫ್ಐಆರ್ (sic) ಮಾಡಲು ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.
“ನನ್ನ ಜೀವನದಲ್ಲಿ ಈ ರೀತಿ ನನಗೆ ಎಂದಿಗೂ ಸಂಭವಿಸಿಲ್ಲ. ಮುಂಬೈನಲ್ಲಿ ನಾನು ಇದನ್ನು ಎದುರಿಸಬೇಕಾಗಿರುವುದು ಇದೇ ಮೊದಲು. ಅದು ಏನು ಎಂದು ನನಗೆ ನಿಜವಾಗಿಯೂ ತಿಳಿದಿಲ್ಲ ಎಮದು ಹೇಳಿದ್ದಾರೆ.
ಇತ್ತೀಚೆಗಷ್ಟೆ, ಪಾಯಲ್ ಘೋಷ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು, ಅದರಲ್ಲಿ ತನ್ನ ಗಾಯಗೊಂಡ ಕೈಯನ್ನು ತೋರಿಸಿದ್ದರು.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement