ಕೋರ್ಟ್ ಆದೇಶವಿದ್ದರೂ ಕೆಲಸಕ್ಕೆ ನೇಮಿಸಿಕೊಳ್ಳದ ಆರೋಪ: ಗ್ರಾ.ಪಂ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಾಟರ್‌ಮ್ಯಾನ್

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯತದ ಮುಂಭಾಗದಲ್ಲಿ ವಾಟರ್ ಮ್ಯಾನ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಹಂಪಾಪುರ ಗ್ರಾಮದ ಕುಮಾರಸ್ವಾಮಿ (26) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ನೇರಳೆ ಗ್ರಾಮ ಪಂಚಾಯತದ ಹಂಪಾಪುರ ಗ್ರಾಮದ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿಯವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ವಜಾ ಅದೇಶ ಪ್ರಶ್ನಿಸಿ ಕುಮಾರಸ್ವಾಮಿ ಕೊರ್ಟಿಗೆ ಹೋಗಿದ್ದರು. ಕುಮಾರಸ್ವಾಮಿಯನ್ನು ಮತ್ತೆ ವಾಟರ್ ಮ್ಯಾನ್ ಕೆಲಸದಲ್ಲಿ ಮುಂದುವರಿಸುವಂತೆ ಕೋರ್ಟ್ ಆದೇಶ ನೀಡಿದೆ. ಆದರೆ ಕೋರ್ಟ್ ಆದೇಶವಿದ್ದರೂ ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಕುಮಾರಸ್ವಾಮಿ ಅವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

0 / 5. 0

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ 'ಸಿಮ್ ಬಾಕ್ಸ್' ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

ನಿಮ್ಮ ಕಾಮೆಂಟ್ ಬರೆಯಿರಿ

advertisement