ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ ಡಿಕೆಶಿ.. ಮುಂದೇನಾಯ್ತು…!

ಬೆಂಗಳೂರು: ಇಂದು (ಬುಧವಾರ) ನಡೆಯುತ್ತಿದ್ದ ವಿಧಾನಸಭಾ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ ಪ್ರಸಂಗ ಕಲಾಪದಲ್ಲಿ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿತು.
ಸದನದ ಕಲಾಪದ ವೇಳೆ ಸಿದ್ದರಾಮಯ್ಯ ಅವರ ಪಂಚೆ ಬಿಚ್ಚಿರುವುದನ್ನು ಗಮನಿಸಿದ ಡಿ.ಕೆ. ಶಿವಕುಮಾರ್ ಬಳಿಗೆ ಬಂದು ತಮ್ಮ ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಹೇಳಿದ್ದಾರೆ.

ಆಗ ಸಿದ್ದರಾಮಯ್ಯನವರು, ನಗುನಗುತ್ತಾ ಪಂಚೆ ಬಿಚ್ಚಿ ಹೋಗಿದೆ, ಸರಿ ಮಾಡಿಕೊಳ್ಳುತ್ತೇನೆ, ಈಶ್ವರಪ್ಪಾ ಪಂಚೆ ಬಿಚ್ಚಿ ಹೋಗಿದೆ ಎಂದು ಹೇಳಿ ಕುಳಿತುಕೊಂಡು ಸರಿಪಡಿಸಿಕೊಂಡರು.

ಯಾರಿಗೂ ಗೊತ್ತಾಗುವುದು ಬೇಡ ಅಂತ ಅಧ್ಯಕ್ಷರು ಬಂದು ನಿಮ್ಮ ಕಿವಿಯಲ್ಲಿ ಮೆತ್ತಗೆ ಹೇಳಿದರೆ ನೀವು ಅದನ್ನು ಊರೆಗೆಲ್ಲಾ ಹೇಳಿಕೊಂಡು ಬಂದಿರಿ, ಅವರ ಶ್ರಮ ವ್ಯರ್ಥವಾಯಿತು. ನೋಡಿ ಈಶ್ವರಪ್ಪನವರು ಕಾಯ್ತಿರ್ತಾರೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಎದ್ದುನಂತು ತಮಾಷೆ ಮಾಡಿದರು.

ಮೊದಲು ಪಂಚೆ ಕಟ್ಟಿದರೆ ಬಿಚ್ಚಿಕೊಳ್ಳುತ್ತಿರಲಿಲ್ಲ,‌ ಈಗ ಕೊರೋನಾ‌ ಬಂದ ಬಳಿಕ ಬೊಜ್ಜು ಜಾಸ್ತಿ ಬಂದಿದೆ, ಪಂಚೆ ಬಿಚ್ಚಿಕೊಳ್ಳುತ್ತದೆ, ಅದಕ್ಕೆ ಯಾವಾಗಲೂ ಜುಬ್ಬಾ ಹಾಕಿಕೊಳ್ಳೋದು ಎಂದರು ಸಿದ್ದರಾಮಯ್ಯ. ಬಹಳಷ್ಟು ಮಂದಿ ನಿಲುವಂಗಿ ಹಾಕಿಕೊಳ್ಳುತ್ತಾರೆ. ಇದರಿಂದ ಪಂಚೆನೂ ಬೇಕಿಲ್ಲ, ಪ್ಯಾಂಟ್ ಕೂಡ ಬೇಕಿಲ್ಲ ಎಂದು ಪಂಚೆಯ ಬಗ್ಗೆ ಸಿದ್ದರಾಮಯ್ಯ ತಮ್ಮ ವಿಶೇಷ ವಿಶ್ಲೇಷಣೆ ನೀಡಿ, ಪ್ರಸಂಗ ಕೊನೆಗಾಣಿಸಿದರು.
ಕಲಾಪದಲ್ಲಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಪ್ರವಾಸೋದ್ಯಮದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಸಾಂಸ್ಕೃತಿಕ ನಗರಿ ಎಂಬುದಕ್ಕೆ ಕಳಂಕ ಬರುತ್ತದೆ ಎಂದು ಈ ವಿಚಾರವಾಗಿ ಗಂಭೀರವಾಗಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement