ಅಲಿಗಢ: ಪ್ರತಿದಿನ ಸ್ನಾನ ಮಾಡಲ್ಲ ಎಂದು ಪತ್ನಿಗೆ ತಲಾಖ್‌ ಹೇಳಿದ ಪತಿ..!

ಅಲಿಗಢ: ಉತ್ತರಪ್ರದೇಶದ ಅಲಿಗಢದಲ್ಲಿ ಓರ್ವ ವ್ಯಕ್ತಿ ತನ್ನ ಪತ್ನಿ ಪ್ರತಿದಿನ ಸ್ನಾನಮಾಡುವುದಿಲ್ಲವೆಂಬ ಕಾರಣಕ್ಕೆ ಆಕೆಗೆ ತ್ರಿವಳಿ ತಲಾಕ್ ಹೇಳಿದ್ದಾನೆ . ಹೆಂಡತಿ ತನ್ನ ಮದುವೆಯನ್ನು ಉಳಿಸಲು, ಮಹಿಳಾ ಸಂರಕ್ಷಣಾ ಕೋಶಕ್ಕೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಅಲಿಗಢ ಮಹಿಳಾ ಸಂರಕ್ಷಣಾ ಕೋಶವು ಪುರುಷ ಮತ್ತು ಆತನ ಪತ್ನಿಗೆ ತಮ್ಮ ಮದುವೆಯನ್ನು ಉಳಿಸಿಕೊಳ್ಳಲು ಸಲಹೆಯನ್ನು ನೀಡುತ್ತಿದೆ. ಒಬ್ಬ ಮಹಿಳೆ ನಮಗೆ ಲಿಖಿತ ದೂರು ನೀಡಿದ್ದು, ತನ್ನ ಪತಿ ನಾನು ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ನೆಪದಲ್ಲಿ ತ್ರಿವಳಿ ತಲಾಖ್ ನೀಡಿದ್ದಾನೆ ಎಮದು ದೂರಿನಲ್ಲಿ ತಿಳಿಸಿದ್ದಾಳೆ.
ದಂಪತಿಗೆ ಮತ್ತು ಅವರ ಪೋಷಕರಿಗೆ ಅವರ ಮದುವೆಯನ್ನು ಉಳಿಸಲು ನಾವು ಸಮಾಲೋಚನೆ ನೀಡುತ್ತಿದ್ದೇವೆ’ ಎಂದು ಮಹಿಳಾ ರಕ್ಷಣೆಯೊಂದಿಗೆ ಕೆಲಸ ಮಾಡುವ ಸಲಹೆಗಾರರೊಬ್ಬರು ಹೇಳಿದ್ದಾರೆ. ಮಹಿಳೆ ತನ್ನ ವಿವಾಹವನ್ನು ಮುಂದುವರಿಸಲು ಮತ್ತು ತನ್ನ ಪತಿಯೊಂದಿಗೆ ಸಂತೋಷದ ಜೀವನವನ್ನು ನಡೆಸಲು ಬಯಸುವುದಾಗಿ ಮಹಿಳಾ ಸಂರಕ್ಷಣಾ ಕೋಶಕ್ಕೆ ದೃಢಪಡಿಸಿದ್ದಾರೆ ಎಂದು ಸಲಹೆಗಾರರು ತಿಳಿಸಿದ್ದಾರೆ ಎಂದು ನ್ಯೂಸ್‌ 18.ಕಾಮ್‌ ವರದಿ ಮಾಡಿದೆ.
ಕ್ವಾರ್ಸಿ ಗ್ರಾಮದ ಮಹಿಳೆ ಎರಡು ವರ್ಷಗಳ ಹಿಂದೆ ಚಂದೌಸ್ ಹಳ್ಳಿಯ ವ್ಯಕ್ತಿಯನ್ನು ಮದುವೆಯಾಗಿದ್ದಳು ಮತ್ತು ಅವರಿಗೆ ಒಂದು ವರ್ಷದ ಮಗುವಿದೆ ಎಂದು ಸಲಹೆಗಾರರು ತಿಳಿಸಿದ್ದಾರೆ. ಆ ವ್ಯಕ್ತಿ, ಕೌನ್ಸೆಲಿಂಗ್ ಸಮಯದಲ್ಲಿ, ಪದೇ ಪದೇ ಮತ್ತು ನಾನು ನನ್ನ ಪತ್ನಿಯೊಂದಿಗೆ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ. ನನ್ನ ಹೆಂಡತಿ ಪ್ರತಿದಿನವೂ ಸ್ನಾನ ಮಾಡದ ಕಾರಣ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆಯಲು ಸಹಾಯ ಮಾಡುವಂತೆ ನಮಗೆ ಅರ್ಜಿಯನ್ನು ನೀಡಿದ. ತನ್ನ ಅರ್ಜಿಯಲ್ಲಿ ವ್ಯಕ್ತಿಯು ತನ್ನ ಹೆಂಡತಿಗೆ ಸ್ನಾನ ಮಾಡಲು ಕೇಳಿದ ನಂತರ ಪ್ರತಿದಿನ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಯಿತು ಎಂದು ನಮಗೆ ತಿಳಿಸಿದ ಎಂದು ಎಂದು ಕೌನ್ಸಿಲ್‌ ಮಾಡುವ ವ್ಯಕ್ತಿ ಹೇಳಿದರು ಎಂದು ವರದಿ ಹೇಳಿದೆ.
ಮದುವೆ ಮುರಿಯದಂತೆ ಪುರುಷನಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿದ್ದೇವೆ. ಏಕೆಂದರೆ ಇದು ಒಂದು ಸಣ್ಣ ಸಮಸ್ಯೆಯಾಗಿದೆ ಮತ್ತು ಅದನ್ನು ಪರಿಹರಿಸಬಹುದು ಎಂದರು. ಮಹಿಳಾ ರಕ್ಷಣಾ ಕೋಶವು ಗಂಡ ಮತ್ತು ಹೆಂಡತಿ ಇಬ್ಬರಿಗೂ ತಮ್ಮ ವಿಚ್ಛೇದನದ ಬಗ್ಗೆ ಯೋಚಿಸಲು ಸಮಯವನ್ನು ನೀಡಿದೆ ಎಂದರು ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement