ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ, ಪೊಲೀಸ್‌ ಗುಂಡಿಗೆ ಇಬ್ಬರು ಸಾವು:ಅಸ್ಸಾಂ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಆದೇಶ

ಗುವಾಹತಿ: ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧೋಲ್ಪುರ್ ಗೋರುಖುತಿ ಪ್ರದೇಶದಲ್ಲಿ ಗುರುವಾರ ಪೊಲೀಸರು ಮತ್ತು ಸ್ಥಳೀಯರ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟರು ಮತ್ತು 9 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಗಾಯಗೊಂಡರು.
ಭದ್ರತಾ ಸಿಬ್ಬಂದಿಯ ತಂಡವು ರಾಜ್ಯ ಕೃಷಿ ಯೋಜನೆಗೆ ಸೇರಿದ ಭೂಮಿಯಿಂದ ಅಕ್ರಮ ಅತಿಕ್ರಮಣಕಾರರನ್ನು ಹೊರಹಾಕಲು ಆ ಪ್ರದೇಶಕ್ಕೆ ಹೋದ ಸಮಯದಲ್ಲಿ ಘರ್ಷಣೆ ಉಂಟಾಗಿ ನಡೆದ ಗೊಲಿಬಾರರ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಭದ್ರತಾ ಸಿಬ್ಬಂದಿ ಪ್ರದೇಶವನ್ನು ತಲುಪಿದಾಗ, ಸಾವಿರಾರು ಸ್ಥಳೀಯರು ಜಮಾಯಿಸಿದರು ಮತ್ತು ತೆರವು ಅಭಿಯಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಸ್ಸಾಂ ಕ್ಯಾಬಿನೆಟ್ ಈ ಹಿಂದೆ ಭೂಮಿಯನ್ನು ಅತಿಕ್ರಮಣದಾರರಿಂದ ಸಂಪೂರ್ಣವಾಗಿ ಹಿಂಪಡೆದು ಅದನ್ನು ರಾಜ್ಯ ಕೃಷಿ ಯೋಜನೆಗೆ ಪರಿವರ್ತಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಪೊಲೀಸ್ ದೌರ್ಜನ್ಯದ ವರದಿಗಳು ಮತ್ತು ವೀಡಿಯೊಗಳು ಹೊರಬಂದ ನಂತರ ಘಟನೆಯಲ್ಲಿ ಅಸ್ಸಾಂ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಧೋಲ್ಪುರ್ ಬಜಾರ್ ಪ್ರದೇಶ, ಪಶ್ಚಿಮ ಚುಬಾ ಪ್ರದೇಶ, ಧೋಲ್ಪುರ ನಂ. 1 ಮತ್ತು 3 ಸಿಪಜಾರ್ ಕಂದಾಯ ವೃತ್ತದ ಅಡಿಯಲ್ಲಿ ಧೋಲ್ಪುರ ನಂ. 1 ಮತ್ತು 3 ಪ್ರದೇಶಗಳು ಭದ್ರತಾ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಪ್ರದೇಶವನ್ನು ತೆರವು ಮಾಡಲು ತಲುಪಿದಾಗ ಘರಷ್ಣೆ ನಡೆದು ಈ ಘಟನೆ ಸಂಭವಿಸಿದೆ.
ಮಧ್ಯಾಹ್ನ 12.30 ರ ಸುಮಾರಿಗೆ, ಸಾವಿರಾರು ಪ್ರತಿಭಟನಾಕಾರರು ಈ ಪ್ರದೇಶದಲ್ಲಿ ಜಮಾಯಿಸಿದರು ಮತ್ತು ಭದ್ರತಾ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಮಧ್ಯಾಹ್ನ 1.10 ರ ಸುಮಾರಿಗೆ ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದರು ಮತ್ತು ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಿದರು. ಇದರಿಂದ ಪೊಲೀಸರು ಗುಂಡು ಹಾರಿಸಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದರು.
ದಾಳಿಯಲ್ಲಿ ಒಂಬತ್ತು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಿರಿಯ ಸಹೋದರ ಸುಶಂತ ಬಿಸ್ವ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುಶಾಂತ ಬಿಸ್ವ ಶರ್ಮಾ ಹೇಳಿದ್ದಾರೆ. “ಇಲ್ಲಿಯವರೆಗೆ, ಪೊಲೀಸ್ ಗುಂಡಿನ ದಾಳಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಅಪ್‌ಡೇಟ್ ಬರುತ್ತದೆ” ಎಂದು ಸುಶಾಂತ ಬಿಸ್ವಾ ಶರ್ಮಾ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement