ಒಡಿಶಾ: ನದಿಯಲ್ಲಿ ಸಿಲುಕಿದ್ದ ಆನೆ ರಕ್ಷಣಾ ಕಾರ್ಯಾಚರಣೆ ವೇಳೆ ದುರಂತ; ಪತ್ರಕರ್ತ, ಒಡಿಆರ್‌ಎಎಫ್ ಸಿಬ್ಬಂದಿ ಸಾವು

ಕಟಕ್: ಒಡಿಶಾದ ಕಟಕ್ ಜಿಲ್ಲೆಯ ಮಹಾನದಿಯ ಮುಂಡಾಲಿ(Mundali) ಸೇತುವೆಯಲ್ಲಿ ಪ್ರವಾಹಕ್ಕೆ ಸಿಲುಕೊಂಡಿದ್ದ ಆನೆ ರಕ್ಷಣಾ ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದೆ.
ಶುಕ್ರವಾರ ಒಡಿಶಾದ ಮಹಾನದಿ ನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾದೇಶಿಕ ಟಿವಿ ಚಾನೆಲ್ ಪತ್ರಕರ್ತ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆಯ (ಓಡಿಆರ್‌ಎಎಫ್) ಸದಸ್ಯರು ಮೃತಪಟ್ಟಿದ್ದಾರೆ.
ಪತ್ರಕರ್ತ ಅರಿಂದಮ್ ದಾಸ್ ಮತ್ತು ಅವರ ಕ್ಯಾಮರಾಮನ್ ಸಹೋದ್ಯೋಗಿ ಪ್ರಭಾತ್ ಸಿನ್ಹಾ ಶುಕ್ರವಾರ ಮುಂಜಾನೆಯಿಂದ ಕಟಕ್‌ನ ಮುಂಡಲಿ ಸೇತುವೆಯ ಬಳಿ ಮಹಾನದಿ ನದಿಯಲ್ಲಿ ಸಿಲುಕಿರುವ ಜಂಬೋವನ್ನು ರಕ್ಷಿಸಲು ಹೋದರು. ಅವರ ಜೊತೆಯಲ್ಲಿ ಐದು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆಯ (ODRAF) ಸದಸ್ಯರು ಇದ್ದರು.
ರಕ್ಷಣಾ ತಂಡವು ಅರೆ ವಯಸ್ಕ ನದಿ ತೀರಕ್ಕೆ ತರಲು ಪ್ರಯತ್ನಿಸುತ್ತಿದ್ದಾಗ, ನದಿ ಪ್ರವಾಹಕ್ಕೆ ಅವರ ದೋಣಿ ಮಗುಚಿತು ಮತ್ತು ಅದರಲ್ಲಿದ್ದ ಜನರು ಆಳವಾದ ನೀರಿನಲ್ಲಿ ಬಿದ್ದರು.
ಮುಂಡಾಲಿ ಸೇತುವೆ ಬಳಿ ಅರೆವಯಸ್ಕ ಆನೆಯು ಪ್ರವಾಹದಲ್ಲಿ ಸಿಲುಕಿ 6 ಗಂಟೆಗಳ ಕಾಲ ಪರದಾಡಿತ್ತು. ಆನೆ ರಕ್ಷಣೆ (Rescue)ಕಾರ್ಯಾಚರಣೆಗೆ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಆಗಮಿಸಿತ್ತು. ರಕ್ಷಣಾ ತಂಡದ ಜೊತೆ ಅಲ್ಲಿನ ಪ್ರಾದೇಶಿಕ ಟಿವಿಯೊಂದರ ಪತ್ರಕರ್ತರೂ ದೋಣಿಯಲ್ಲಿ ತೆರಳಿದ್ದರು. ಈ ವೇಳೆ ನೀರಿನ ರಭಸಕ್ಕೆ ದೋಣಿ ಮಗುಚಿ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆಪತ್ರಕರ್ತ ಅರಿಂದಾಮ್ ದಾಸ್(Arindam Das) ಮೃತಪಟ್ಟಿದ್ದಾರೆ. ಇನ್ನು ಇವರ ಸಹೋದ್ಯೋಗಿ ವಿಡಿಯೋ ಪತ್ರಕರ್ತ ಪ್ರಭಾತ್ ಸಿನ್ಹಾ( ಎಂಬಾತ ಗಾಯಗೊಂಡಿದ್ದಾರೆ. ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. .
ಅರಿಂದಾಮ್ ದಾಸ್ ಹಾಗೂ ಪ್ರಭಾತ್ ಸಿನ್ಹಾ( ಒಡಿಯಾ ಟಿವಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ದುರ್ಘಟನೆ ನಡೆಯುತ್ತಿದ್ದಂತೆ, ದಾಸ್ ಅವರನ್ನ ಕಟಕ್ ನ ಎಸ್ ಸಿಬಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಆದರೂ ದಾಸ್ ಮೃತಪಟ್ಟಿದ್ದಾರೆ.
ಒಡಿಶಾದ ಎರಡು ವಿಭಾಗಗಳ 80 ಅರಣ್ಯ ಅಧಿಕಾರಿಗಳು ಮತ್ತು ಒಡಿಆರ್ ಎಎಫ್ ಸದಸ್ಯರ ತಂಡವು ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಈ ರಕ್ಷಣಾ ತಂಡದೊಂದಿಗೆ ಇಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ಹೇಗೆ ಅನುಮತಿ ನೀಡಲಾಯಿತು ಎಂಬುದರ ಬಗ್ಗೆ ಒಡಿಶಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತನಿಖೆಯನ್ನು ಆರಂಭಿಸಿದೆ. “ಈ ದುರ್ಘಟನೆ ನಡೆಯಬಾರದಿತ್ತು, ನಡೆದುಹೋಗಿದೆ ಈ ಬಗ್ಗೆ ತನಿಖೆ ಕೂಡ ನಡೆಯಲಿದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಅಥವಾ ಈ ರೀತಿಯ ಕಠಿಣ ಪರಿಸ್ಥಿತಿಗಳಲ್ಲಿ ರಕ್ಷಣಾ ತಂಡದೊಂದಿಗೆ ಯಾರು ಹೋಗುವುದು ಸೂಕ್ತವಲ್ಲ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಗುರುವಾರ ತಡರಾತ್ರಿ ಚಂದಕದಿಂದ ಬಂಕಿಗೆ 17 ಆನೆಗಳ ಹಿಂಡು ಸಂಚರಿಸುತ್ತಿತ್ತು. ಇದೇ ವೇಳೆ ನದಿಯನ್ನು ದಾಟುವ ಸಂದರ್ಭದಲ್ಲಿ ಮೂರು ಆನೆಗಳು ಪ್ರವಾಹದಲ್ಲಿ ಸಿಲುಕಿದ್ದವು. ಮೂರರಲ್ಲಿ ಎರಡು ಆನೆ ಹರಸಾಹಸ ಪಟ್ಟು ದಡ ಸೇರಿಕೊಂಡಿತ್ತು. ಒಂದು ಅರೆ ವಯಸ್ಕ ಆನೆ ನದಿಯಲ್ಲಿ ಸಿಲುಕಿ ಪರದಾಡುತ್ತಿತ್ತು. ಈ ಆನೆ ದಡ ಸೇರಲು 20 ಮೀಟರ್ ಕ್ರಮಿಸಬೇಕಿತ್ತು. ದಡಸೇರಲು ಈ ಸಲಗ ಹರಸಾಹಸ ಪಟ್ಟು ಸುಸ್ತಾಗಿತ್ತು. ಈ ವೇಳೆ ಕಾರ್ಯಾಚರಣೆಗೆ ರಕ್ಷಣಾ ತಂಡ ಆಗಮಿಸಿತ್ತು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement