ಹುಣಸೂರು: ಸಾಕಾನೆ ಶಿಬಿರದಲ್ಲಿದ್ದ ಹೆಣ್ಣಾನೆ ಸಾವು

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ವನ್ಯಜೀವಿ ವಲಯದ ಸಾಕಾನೆ ಶಿಬಿರದಲ್ಲಿ ಜೆಮಿನಿ ಸರ್ಕಸ್ ಕಂಪನಿಯಿಂದ ವಶಪಡಿಸಿಕೊಂಡ ೪ ಆನೆಗಳಲ್ಲಿ ಒಂದಾದ ಹೆಣ್ಣು ಆನೆಯೊಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
೬೬ ವರ್ಷ ಪ್ರಾಯದ ಹೆಣ್ಣಾನೆಯನ್ನು ಪುನರ್ವಸತಿಗೊಂಡ ದೊಡ್ಡಹರವೆ ಸಾಕಾನೆ ಶಿಬಿರದಲ್ಲಿ ಅರಣ್ಯ ರಕ್ಷಣಾ ಕಾರ್ಯಕ್ಕೆ ಬಳಸಿಕೊಂಡು ಪಾಲನೆ ಮಾಡಲಾಗುತ್ತಿತ್ತು. ಕಳೆದ ೨ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದೆ.
ಸ್ಥಳಕ್ಕೆ ಹಿರಿಯ ಆಧಿಕಾರಿಗಳಾದ ಡಿಸಿಎಫ್ ಡಿ.ಮಹೇಶ್ ಕುಮಾರ್, ಅರಣ್ಯ ಇಲಾಖೆ ಅಧಿಕಾರಿಗಳಾದ ಹನುಮಂತರಾಜು ಇತರರು ಭೇಟಿ ನೀಡಿದ್ದರು. ಪಶು ವೈದ್ಯಾಧಿಕಾರಿಗಳಾದ ವಾಸಿಂ ಮಿರ್ಜಾ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.

0 / 5. 0

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

ನಿಮ್ಮ ಕಾಮೆಂಟ್ ಬರೆಯಿರಿ

advertisement