ಅಂಕೋಲಾ: ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ನೌಕಾನೆಲೆ ಉದ್ಯೋಗಿ ಮುಳುಗಿ ಸಾವು

ಅಂಕೋಲಾ : ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಮುಳುಗಿ ನೌಕಾನೆಲೆ ಉದ್ಯೋಗಿಯೋರ್ವ ಮೃತ ಪಟ್ಟ ಘಟನೆ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ ನಡೆದಿದೆ.
ನೌಕಾನೆಲೆ ಉದ್ಯೋಗಿಯಾಗಿರುವ ತಾಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಪುರಂದರ ಶಿವಾನಂದ ನಾಯ್ಕ ಎಂಬಾತನೇ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಬೇಲೇಕೇರಿ ತೀರದಲ್ಲಿ ಮೀನುಗಾರಿಕೆ ನಡೆಸಲು ಹೋಗಿದ್ದನು. ಸಮುದ್ರದಲ್ಲಿ ಆಕಸ್ಮಿಕವಾಗಿ ಬಿದ್ದು ಕೆಲ ಕಾಲ ಕಣ್ಮರೆಯಾದರು. ತಕ್ಷಣವೇ ಅಂಕೋಲಾ ಪೊಲೀಸ್‌ ಮತ್ತು ಕರಾವಳಿ ಕಾವಲು ಪಡೆ ತಂಡ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಕೊನೆಗೆ ಮೃತ ದೇಹ ಪತ್ತೆಯಾಗಿದೆ.
ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ ಆನಂದ ಗಾಂವಕರ್, ಎಎಸ್ಐ ರವಿಂದ್ರ ನಾಯ್ಕ. ಸಿಬ್ಬಂದಿ ರತ್ನಾಕರ ನಾಯ್ಕ ಹುಡುಕಾಟ ನಡೆಸಿದ್ದಾರೆ. ಅಂಕೋಲಾ ಪಿಎಸ್ಐ ಪ್ರವೀಣಕುಮಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement