ಪಾರ್ಟಿ ಗುಂಗಿಲ್ಲಿ ವಿದ್ಯಾರ್ಥಿಗಳ ಹುಚ್ಚಾಟ: ಕ್ರಿಕೆಟ್‌ ಬ್ಯಾಟಿನಿಂದ 14 ಕಾರುಗಳ ಗಾಜು ಪುಡಿ

ಬೆಂಗಳೂರು: ಸ್ನೇಹಿತನ ಜನ್ಮದಿನದ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಬ್ಯಾಟ್ ನಿಂದ ಸುಮಾರು 13 ಕಾರುಗಳ ಗಾಜು ಪುಡಿಮಾಡಿ ಪುಂಡಾಟ ಪ್ರದರ್ಶಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ.
ಎರಡು ದಿನಗಳ ಹಿಂದೆ ಇಂದಿರಾನಗರದಲ್ಲಿ ಮಧ್ಯಾರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಎರಡು ಬೈಕ್ ಗಳಲ್ಲಿ ಬಂದಿದ್ದ ಐವರು ಯುವಕರು ರಸ್ತೆ ಅಕ್ಕಪಕ್ಕ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆದು ವಿಕೃತ ವರ್ತನೆ ತೋರಿದ್ದಾರೆ.
ರಾಜರಾಜೇಶ್ವರಿ ನಗರದ ಕೃಷ್ಣ ಗಾರ್ಡನ್, ಕೆಂಗೇರಿಯ ಭಾಗೇಗೌಡ ಲೇಔಟ್ ನಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ರೋಹಿನ್ ಸೈನಿ ಎಂಬಾತನ ಬರ್ತಡೆ ಆಚರಿಸಿದ್ದು, ಉತ್ತರ ಪ್ರದೇಶ ಮೂಲದ ಸಕ್ಕಂ ಭಾರದ್ವಾಜ್, ಬಿಹಾರ ಮೂಲದ ಮಾಯಾಂ, ಅದ್ನಾನ್ ಪಹಾದ್, ಜಯಸ್ ಎಂಬವರನ್ನು ಬಂಧಿಸಲಾಗಿದೆ.
ಕಾರುಗಳ ಗಾಜುಗಳನ್ನು ಪುಡಿ ಮಾಡಿದವರೆಲ್ಲರೂ ಇಂಜಿನಿಯರಿಂಗ್ 7ನೇ ಸೆಮ್ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಇವರು ಕೆಂಗೇರಿ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ಮಾಡುತ್ತಿದ್ದರು. ಪಾರ್ಟಿ ಮಧ್ಯೆ ಕೂಲ್ ಡ್ರಿಂಕ್ ತರಲು ಶೆಲ್ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದರು. ಈ ವೇಳೆ ಕೈನಲ್ಲಿದ್ದ ಬ್ಯಾಟ್ ನಿಂದ ಕಾರ್ ಗ್ಲಾಸ್ ಒಡೆದಿದ್ದಾರೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement